Monday, 6th January 2025

BBK 11: ಕಿಚ್ಚನ ವಾರದ ಪಂಚಾಯಿತಿಗೆ ಕ್ಷಣಗಣನೆ: ಮೈ ಮರೆತವರಿಗೆ ಸುದೀಪ್ ಪಾಠ

Varada Kathe Kichchana Jothe (1)

ಬಿಗ್ ಬಾಸ್ ಕನ್ನಡ ಸೀಸನ್ 11 ರ (Bigg Boss Kannada 11) 14ನೇ ವಾರದ ಪಂಚಾಯಿತಿಗೆ ಕ್ಷಣಗಣನೆ ಶುರುವಾಗಿದೆ. ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಡೆಯಲಿದೆ. ಈ ವಾರ ಫ್ಯಾಮಿಲಿ ವೀಕ್ ಆಗಿತ್ತು. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದ್ದು, ಇದಕ್ಕೂ ಮುನ್ನ ಇರುವ 9 ಸ್ಪರ್ಧಿಗಳಿಗೆ ಜೋಶ್ ಬರಲು ಕುಟುಂಬದವರನ್ನು ಮನೆಯೊಳಗೆ ಕರೆಸಲಾಗಿತ್ತು. ಸ್ಪರ್ಧಿಗಳ ಅಮ್ಮಂದಿರು, ಅಪ್ಪಂದಿರು ಮಡದಿ, ಮಕ್ಕಳು ಬಿಗ್ ಬಾಸ್​ಗೆ ಬಂದಿದ್ದರು. ಮನೆಯಲ್ಲಿರುವ 9 ಸ್ಪರ್ಧಿಗಳ ಕುಟುಂಬದವರು ಆಗಮಿಸಿದ್ದರು.

ಮನೆಯವರು ಬಂದು ಸಲಹೆ ನೀಡಿದ ಕುರಿತು ಕಿಚ್ಚ ಸುದೀಪ್ ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಡಿಸ್ಕಸ್ ಮಾಡಲಿದ್ದಾರೆ. ಇವತ್ತಿನ ಕಿಚ್ಚನ ಪಂಚಾಯ್ತಿಯಲ್ಲಿ ಮನೆಯವರ ಜೊತೆ ಕಾಲ ಕಳೆದ ಖುಷಿಯ ಜೊತೆಗೆ ಮೈ ಮರೆತು ಮಾತನಾಡಿರೋ ಮಾತು ಚರ್ಚೆಯಾಗಲಿದೆ. ಮನೆ ಊಟ ತಿಂದು ಮೈ ಮರೆತವರು ಯಾರು? ಮನೆ ಮಾತನ್ನ ಕೇಳಿ ಎಚ್ಚರ ಆದವರು ಯಾರು? ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

ಮನೆಯವರ ಭೇಟಿಯಿಂದ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ, ಸಂತೋಷ ಹೆಚ್ಚಾಗಿರಬಹುದು. ಆದರೆ ಸ್ಪರ್ಧಿಗಳ ಆಟದಲ್ಲೂ ಬದಲಾವಣೆ ಆಗಲಿದೆ. ಮುಖ್ಯವಾಗಿ ತ್ರಿವಿಕ್ರಮ್‌, ಮಂಜು, ಗೌತಮಿ ಅವರ ಮನೆಯವರು ಅನೇಕ ಸಲಹೆ ನೀಡಿದ್ದರು. ಗೌತಮಿ ಅವರ ಗಂಡ ಬಂದು ಸಮಯ ಬಂದಾಗ ನೀವು ಅವರನ್ನು ತುಳಿದುಕೊಂಡು ಮುಂದಕ್ಕೆ ಹೋಗಬೇಕು ಎಂದು ಸಲಹೆ ಕೂಡ ಕೊಟ್ಟಿದ್ದರು.

ಮಂಜು ಅವರ ತಂಗಿ ಕೂಡ ಬೇಡ ಅವರ ಜೊತೆ ಇರೋದು. ಫ್ರೆಂಡ್‌ ಶಿಪ್‌ನ ಬ್ರೇಕ್ ಅಪ್ ಮಾಡು. ನನಗೆ ಪ್ರಾಮಿಸ್ ಮಾಡಬೇಕು ಎಂದು ಮಂಜು ತಂಗಿ ಭಾಷೆ ಕೂಡ ತೆಗೆದುಕೊಂಡಿದ್ದಾರೆ. ಈ ಎಲ್ಲ ವಿಷಯದ ಕುರಿತು ಏನು ಬದಲಾವಣೆ ಆಗಲಿದೆ ಎಂಬ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ನೋ ಎಲಿಮಿನೇಷನ್:

ಈ ವಾರ ಎಲಿಮಿನೇಷನ್ ಪ್ರಕ್ರಿಯೆ ಇಲ್ಲ. ಈಗಾBBK 11: ಮೂರು ತಿಂಗಳಾಯ್ತು: ಕಿಸ್ ಟಾಸ್ಕ್​ನಲ್ಲಿ ಧನರಾಜ್ ಕಾಮಿಡಿ ಝಲಕ್ಗಲೇ ಬಿಬಿಕೆ 11 ನಲ್ಲಿ 2ನೇ ವಾರ, 6ನೇ ವಾರ, 10ನೇ ವಾರ, 12ನೇ ವಾರ ಎಲಿಮಿನೇಷನ್‌ ಇರಲಿಲ್ಲ. ಈ ವಾರವೂ ಎಲಿಮಿನೇಷನ್ ಕ್ಯಾನ್ಸಲ್ ಆಗಿದೆ. ಹೀಗಾಗಿ ಈ ವಾರ ಯಾವೊಬ್ಬ ಸ್ಪರ್ಧಿಯೂ ಬಿಗ್ ​ಬಾಸ್​ ಮನೆಯಿಂದ ಆಚೆ ಹೋಗುವುದಿಲ್ಲ. ಆದರೆ, ಇದರಲ್ಲೊಂದು ಟ್ವಿಸ್ಟ್ ಇರುವ ಸಾಧ್ಯತೆ ಇದೆ. ಮುಂದಿನ ವಾರ ಮಿಡ್‌ ವೀಕ್‌ ಅಥವಾ ಮಿಡ್‌ ನೈಟ್‌ ಎಲಿಮಿನೇಷನ್‌ ಇರಲಿದೆ ಎನ್ನಲಾಗಿದೆ. ಸೀಸನ್‌ನಲ್ಲಿ ಒಮ್ಮೆಯಾದರು ಮಿಡ್‌ ವೀಕ್‌ ಅಥವಾ ಮಿಡ್‌ ನೈಟ್‌ ಎಲಿಮಿನೇಷನ್‌ ಇರುತ್ತದೆ. ಇದು ಮುಂದಿನ ವಾರವೇ ನಡೆಯಲಿದೆ ಎಂಬ ಮಾತು ಕೇಳಿಬರುತ್ತಿದೆ.

BBK 11: ಮೂರು ತಿಂಗಳಾಯ್ತು: ಕಿಸ್ ಟಾಸ್ಕ್​ನಲ್ಲಿ ಧನರಾಜ್ ಕಾಮಿಡಿ ಝಲಕ್