Friday, 22nd November 2024

Vikrant Massey: ಭಾರತದ ಮುಸ್ಲಿಮರು ಅಪಾಯದಲ್ಲಿಲ್ಲ… ನಟ ವಿಕ್ರಾಂತ್‌ ಮಾಸ್ಸೆ ವಿವಾದ; ಪ್ರಚಾರದ ಗಿಮಿಕ್‌ ಎಂದ ನೆಟ್ಟಿಗರು

Vikrant Massey

ಮುಂಬೈ: ಬಾಲಿವುಡ್ ನಟ ವಿಕ್ರಾಂತ್ ಮಾಸ್ಸೆ (Vikrant Massey) ತಮ್ಮ ಮುಂಬರುವ ಚಿತ್ರ ʼದಿ ಸಬರಮತಿʼಯ (The Sabarmati) ಪ್ರಚಾರದಲ್ಲಿ ತೊಡಗಿದ್ದಾರೆ. ಭಾರತದಲ್ಲಿ 2002 ರಲ್ಲಿ ನಡೆದ ಗೋಧ್ರಾ ರೈಲು (Godhra train burning incident)  ದುರಂತವನ್ನಾಧಾರಿಸಿ ನಿರ್ಮಾಣಗೊಂಡಿರುವ ಸಿನಿಮಾ ಇದಾಗಿದೆ. ವಿಕ್ರಾಂತ್‌ ಮಾಸ್ಸೆ, ರಾಶಿ ಖನ್ನಾ ಮತ್ತು ರಿದ್ಧಿ ಡೋಗ್ರಾ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿಕ್ರಾಂತ್‌ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮುಸ್ಲಿಮರ ಬಗ್ಗೆ ಮಾತನಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ದಿ ಸಬರಮತಿ ಚಿತ್ರದ ಕುರಿತು ಸಂದರ್ಶನದಲ್ಲಿ ಮಾತನಾಡಿದ ಮಾಸ್ಸೆ “ನನಗೆ ಕೆಟ್ಟದಾಗಿ ಕಂಡದ್ದು ನಿಜವಾಗಿ ಕೆಟ್ಟದ್ದಲ್ಲ. ಮುಸ್ಲಿಮರು ಅಪಾಯದಲ್ಲಿದ್ದಾರೆ ಎಂದು ಜನರು ಹೇಳುತ್ತಾರೆ. ಯಾರೂ ಅಪಾಯದಲ್ಲಿಲ್ಲ; ಎಲ್ಲವೂ ಸರಿಯಾಗಿ ನಡೆಯುತ್ತಿದೆ. ಅದಕ್ಕಾಗಿಯೇ ಇಂದು ನಾನು ಬದಲಾಗಿದ್ದೇನೆ” ಎಂದು ಹೇಳಿದರು. ಈ ಹಿಂದೆ ಕೇಂದ್ರ ಸರ್ಕಾರದ ಬಗ್ಗೆ ಮಾಸ್ಸೆ ಕಿಡಿ ಕಾರಿದ್ದರು.

ವಿಕ್ರಾಂತ್‌ ಮಾಸ್ಸೆ ಹೇಳಿಕೆಗೆ ಕಿಡಿ ಕಾರಿರುವ ನೆಟ್ಟಿಗರು ಸಿನಿಮಾ ಪ್ರಚಾರದ ಗಿಮಿಕ್‌ ಎಂದು ಹೇಳಿದ್ದಾರೆ. ಹಲವರು ಕಮೆಂಟ್‌ ಆಕ್ರೋಶ ವ್ಯಕ್ತಪಡಿಸಿದ್ದು, ಬಾಲಿವುಡ್ ಜನರಿಗೆ ಹೆಚ್ಚು ಮನ್ನಣೆ ನೀಡಬೇಡಿ ಅವರು ಗಾಳಿ ಬಂದ ಕಡೆ ತೂರಿಕೊಳ್ಳುವ ಬುದ್ಧಿವಂತರು ಎಂದು ಹೇಳಿದ್ದಾರೆ . ಮತ್ತೊಬ್ಬರು ಎಲ್ಲಾ ದುಡ್ಡಿನ ಮಹಿಮೆ, ದುಡ್ಡು ಏನನ್ನು ಬೇಕಾದರೂ ಹೇಳಿಸುತ್ತದೆ ಎಂದು ವ್ಯಂಗವಾಡಿದ್ದಾರೆ. ಇನ್ನೊಬ್ಬರು ಸಿನಿಮಾದಲ್ಲಿ ಮಾಡುವ ನಟನೆ ಇಲ್ಲಿ ಮಾಡುತ್ತಿದ್ದಾರೆ ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ : Actor Prabhas: ಪ್ರಭಾಸ್‌ ಜತೆ 3 ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್; ಪ್ಯಾನ್‌ ಇಂಡಿಯಾ ಚಿತ್ರಗಳಿಗೆ ಒಂದಾದ ಸೂಪರ್‌ ಹಿಟ್‌ ಜೋಡಿ

ಕೆಲ ದಿನಗಳ ಹಿಂದೆ ಖಾಸಗಿ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಕುಟುಂಬದ ಬಗ್ಗೆ ಹೇಳಿದ್ದರು. ತಮ್ಮ ತಂದೆ ಸಿಖ್ ಆಗಿದ್ದರೆ, ತಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು, ನಾನು ಹಿಂದೂ ಧರ್ಮದ ಸಂಪ್ರದಾಯವನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಇದಲ್ಲದೆ, ಅವರು ತಮ್ಮ ಹಿರಿಯ ಸಹೋದರ ಮೊಯಿನ್ ಅವರು 17 ವರ್ಷದವರಾಗಿದ್ದಾಗ ಇಸ್ಲಾಂಗೆ ಧರ್ಮಕ್ಕೆ ಮತಾಂತರಗೊಂಡಿದ್ದ ಬಗ್ಗೆ ಹೇಳಿಕೊಂಡಿದ್ದರು. ತಮ್ಮ ತಂದೆ ತಾಯಿ ಮುಕ್ತ ಮನಸ್ಸಿನಿಂದ ಸಹೋದರನ ಆಯ್ಕೆಯನ್ನು ಒಪ್ಪಿಕೊಂಡು ಇಸ್ಲಾಂಗೆ ಮತಾಂತರಗೊಳ್ಳಲು ಅನುಮತಿ ನೀಡಿದ್ದರು ಎಂದು ಹೇಳಿದ್ದರು.