ಹೈದರಾಬಾದ್: ನಟಿ ಜಾಹ್ನವಿ ಕಪೂರ್ (Janhvi Kapoor) ತಮ್ಮ ಬಾಯ್ ಫ್ರೆಂಡ್ ಶಿಖರ್ ಪಹಾರಿಯಾ (Shikhar Pahariya) ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಜಾಹ್ನವಿ ಕಪೂರ್ ಕೂಡ ಈ ಪೋಟೊಗಳನ್ನು ಶೇರ್ ಮಾಡಿದ್ದು ತಮ್ಮ ಫೋಟೊಗಳ ಜೊತೆಗೆ ನಟಿ “ಹ್ಯಾಪಿ ನ್ಯೂ ಇಯರ್” ಎಂದು ಕ್ಯಾಪ್ಶನ್ ನೀಡಿದ್ದಾರೆ(Viral Video)
ನಟಿ ಜಾಹ್ನವಿ ಕಪೂರ್ ಜೊತೆ ಅವರ ಬಾಯ್ ಫ್ರೆಂಡ್ ಶಿಖರ್ ಪಹಾರಿಯಾ ಕೂಡ ಕಾಣಿಸಿಕೊಂಡಿದ್ದಾರೆ. ಜಾಹ್ನವಿ ಕಪೂರ್ ಮತ್ತು ಶಿಖರ್ ಬಹಳ ದಿನಗಳಿಂದ ಜೊತೆಯಲ್ಲಿ ತಿರುಗುತ್ತಿದ್ದು ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಜಾಹ್ನವಿ ಕಪೂರ್ ಮತ್ತು ಅವರ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಜೊತೆಯಾಗಿರುವ ಫೋಟೋಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಮತ್ತೆ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಸಿಂಪಲ್ ಲುಕ್ ನ ನೇರಳೆ ಬ್ಲೌಸ್ ಹಾಗೂ ನೇರಳೆ ದಾವಣಿಯ ಟ್ರೆಡಿಷನಲ್ ಡ್ರೆಸ್ ನಲ್ಲಿ ಜಾಹ್ನವಿ ಕಪೂರ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ಅವರ ಗೆಳೆಯ ಶಿಖರ್ ಪಂಚೆ ಹಾಗೂ ಶಲ್ಯ ಧರಿಸಿ ದೇವಾಲಯಕ್ಕೆ ಆಗಮಿಸಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಅವರ ಅಭಿಮಾನಿಗಳು ಸುತ್ತುವರಿದಿದ್ದರೂ ಅಭಿಮಾನಿಗಳನ್ನು ನಗುಮೊಗದಿಂದ ನಟಿ ಜ್ವಾನಿ ಸ್ವಾಗಸಿದ್ದಾರೆ. ಜಾಹ್ನವಿ ಕಪೂರ್ ಈಗಾಗಲೇ ಹಲವು ಭಾರಿ ತಿರುಪತಿ ದರ್ಶನ ಪಡೆದಿದ್ದಾರೆ. ಪ್ರತಿ ವರ್ಷ ತಾಯಿ ಶ್ರೀದೇವಿ ಹುಟ್ಟುಹಬ್ಬದಂದು ಹಾಗೂ ತನ್ನ ಹೊಸ ಸಿನಿಮಾ ಬಿಡುಗಡೆ ಸಂದರ್ಭದಲ್ಲೂ ನಟಿ ತಿರುಪತಿ ಬೆಟ್ಟವನ್ನು ಏರುತ್ತಾರೆ.
ಇತ್ತೀಚೆಗೆ ನಟಿ ಜೂನಿಯರ್ ಎನ್‌ಟಿಆರ್ ಜೊತೆಯಲ್ಲಿ ದೇವರ’ ಚಿತ್ರದ ಮೂಲಕ ನಟಿಸಿದ್ದರು. ಈ ಚಿತ್ರ ಹಿಟ್ ಆಗಿತ್ತು. ಜಾಹ್ನವಿ ಕಪೂರ್ ಅವರ ಮುಂದಿನ ಚಿತ್ರ ಪರಮ ಸುಂದರಿ ಚಿತ್ರದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಜಾಹ್ನವಿ ಕಪೂರ್ ಮತ್ತು ಸಿದ್ಧಾರ್ಥ್ ಜೊತೆಯಾಗಿ ನಟಿಸುತ್ತಿರುವ ಚಿತ್ರದ ಕಾರಣ ಅಭಿಮಾನಿಗಳಿಗೆ ಬಹಳಷ್ಟು ನಿರೀಕ್ಷೆಯಿದೆ. ದಸ್ವಿ ಖ್ಯಾತಿಯ ತುಷಾರ್ ಜಲೋಟಾ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರೇಮಕಥೆ ಜತೆಗೆ ಘರ್ಷಣೆಯು ಇರಲಿದ್ದು ಚಿತ್ರ ತುಂಬಾ ಡಿಫ್ರೆಂಟ್ ಆಗಿ ಮೂಡಿಬರಲಿದೆ.
ಈ ಸುದ್ದಿಯನ್ನೂ ಓದಿ:Viral Video: ವ್ಯಾಘ್ರ ಕಾಳಗ ಕಂಡು ಪ್ರವಾಸಿಗರು ಶಾಕ್! ಹುಲಿಗಳ ಅಪರೂಪದ ಕ್ಷಣ ಕ್ಯಾಮರ ಕಣ್ಣಲ್ಲಿ ಸೆರೆ