ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) 13ನೇ ವಾರದ ಅಂತ್ಯದಲ್ಲಿದೆ. ಇಂದು ಕಿಚ್ಚ ಸುದೀಪ್ ಆಗಮಿಸಲಿದ್ದು, ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಡೆಯಲಿದೆ. ಈ ವಾರ ಬಿಗ್ ಬಾಸ್ ಮನೆ ರೆಸಾರ್ಟ್ ಆಗಿ ಪರಿವರ್ತನೆಯಾಗಿತ್ತು. ಮನೆಯ 10 ಸದಸ್ಯರನ್ನು ತಲಾ 5 ಜನರಂತೆ ಎರಡು ಗುಂಪುಗಳಾಗಿ ವಿಂಗಡನೆ ಮಾಡಲಾಗಿತ್ತು. ಇದರಲ್ಲಿ ಒಂದು ತಂಡ ಉಳಿದ ಸದಸ್ಯರ ಸೇವೆ ಮಾಡಬೇಕು. ಇದರಲ್ಲಿ ನಡೆದ ಸರಿ ತಪ್ಪುಗಳ ಮಾತುಕತೆ ಇಂದು ನಡೆಯಲಿದೆ.
ಇದರ ಜೊತೆಗೆ ಇಂದು ಓರ್ವ ಸ್ಪರ್ಧಿ ಮನೆಯಿಂದ ಎಲಿಮಿನೇಟ್ ಆಗುತ್ತಾರ ಎಂಬ ಅನುಮಾನ ಮೂಡಿದೆ. ಈ ವಾರ ಘಟಾನುಘಟಿ ಸ್ಪರ್ಧಿಗಳೇ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಯನ್ನು ಬಿಗ್ ಬಾಸ್ ವಿಶೇಷವಾಗಿ ನೀಡಿದರು. ಅದೇನೆಂದರೆ, ನಾಮಿನೇಟ್ ಆಗೋ ಸ್ಪರ್ಧಿಗೆ ಕೃತಕವಾಗಿ ತಯಾರಿಸಿರುವ ಬಾಟಲಿಗಳಿಂದ ಹೊಡೆದು ನಾಮಿನೇಟ್ ಮಾಡಬೇಕಿದೆ. ಮೊದಲು ನಾಮಿನೇಟ್ ಮಾಡಬೇಕು. ಸೂಕ್ತ ಕಾರಣ ಕೊಡಬೇಕು. ಆ ಮೇಲೆ ಬಾಟಲಿಯಿಂದ ತಲೆಗೆ ಹೊಡೆಯಬೇಕು. ಇದು ಈ ವಾರದ ನಾಮಿನೇಷನ್ ಪ್ರಕ್ರಿಯೆ ಆಗಿತ್ತು.
ಇದರ ಮೂಲಕ ಈ ವಾರ ಮನೆಯಿಂದ ಹೊರಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಉಗ್ರಂ ಮಂಜು, ಧನರಾಜ್ ಆಚಾರ್, ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್ ಮತ್ತು ಐಶ್ವರ್ಯಾ ಹೆಸರು ಇದೆ. ಕಳೆದ ಸಂಚಿಕೆಯಲ್ಲಿ ಯಾರು ಕೂಡ ಎಲಿಮಿನೇಟ್ ಆಗಿರಲಿಲ್ಲ.
ಹೀಗಾಗಿ ಈ ವಾರ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ಆಗುತ್ತಾ ಅಂತ ಅನುಮಾನ ಮೂಡಿದೆ. ಇದರಲ್ಲಿ ಒಂದು ಎಲಿಮಿನೇಷನ್ ಪ್ರಕ್ರಿಯೆ ಇಂದು ಆಗಬಹುದು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಳೆದ ಕೆಲವು ವಾರಗಳಿಂದ ಐಶ್ವರ್ಯಾ ಸಿಂಧೋಗಿ ಹಾಗೂ ಚೈತ್ರಾ ಕುಂದಾಪುರ ಡೇಂಜರ್ ಝೋನ್ನಲ್ಲಿದ್ದರು. ಹೀಗಾಗಿ ಇವರ ಪೈಕಿ ಯಾರಾದರು ಒಬ್ಬರು ಈ ವಾರ ಎಲಿಮಿನೇಟ್ ಆಗುವ ಸಂಭವವಿದೆ ಅಥವಾ ಡಬಲ್ ಎಲಿಮಿನೇಷನ್ ಆಗುತ್ತಾ ಎಂಬುದು ನೋಡಬೇಕಿದೆ.
BBK 11: ಕಳಪೆ ಕಾರಣ: ಬಿಗ್ ಬಾಸ್ ಮನೆಯಲ್ಲೇ ಕೊನೆಯಾಯ್ತು ಧನರಾಜ್-ಹನುಮಂತ ಸ್ನೇಹಾ?