Sunday, 15th December 2024

WWCL: ವುಮೆನ್ಸ್‌ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಲೋಗೋ ಲಾಂಚ್‌

WWCL

ಬೆಂಗಳೂರು: ಎನ್ 1 (N 1) ಕ್ರಿಕೆಟ್ ಅಕಾಡೆಮಿಯಿಂದ ಈಗಾಗಲೇ ಸಾಕಷ್ಟು ಕ್ರಿಕೆಟ್ ಲೀಗ್‌ಗಳು ಚಾಲ್ತಿಯಲ್ಲಿವೆ‌. ಟಿಪಿಎಲ್ ಹಾಗೂ ವೃತ್ತಿಪರರಿಗಾಗಿ IPT12ನಿಂದ ಆರಂಭವಾಗಿ ಈಗ WWCL (ವುಮೆನ್ಸ್‌ ವಿಂಡ್ ಬಾಲ್ ಕ್ರಿಕೆಟ್ ಲೀಗ್) ವರೆಗೂ ಬಂದು ನಿಂತಿದೆ. ಇಷ್ಟು ಇದು ಎಲ್ಲ ಲೀಗ್‌ಗಳಲ್ಲೂ ಟೀಮ್‌ಗಳ ಸ್ಟಾರ್ ಬ್ರ್ಯಾಂಡ್‌ ಅಂಬಾಸಿಡರ್ ಆಗಿ ಟೀಮ್ ಜೆರ್ಸಿ ತೊಟ್ಟು ತಮ್ಮ ತಂಡಕ್ಕೆ ಚಿಯರ್ ಅಪ್ ಮಾಡ್ತಿದ್ದ ನಾಯಕಿಯರು ಈಗ ತಾವೇ ಬ್ಯಾಟು ಬಾಲ್ ಹಿಡಿದು ಕ್ರಿಕೆಟ್ ಆಡ್ತಿವಿ, ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ.

ಗಂಡುಮಕ್ಕಳಿಗಾಗಿಯೇ ಇಷ್ಟು ದಿನ‌ ಟಿಪಿಎಲ್, IPT12 ಆಯೋಜಿಸಿದ್ದ ಎನ್‌ 1 ಕ್ರಿಕೆಟ್ ಅಕಾಡೆಮಿಯ ಸುನೀಲ್ ಕುಮಾರ್ ಬಿ.ಆರ್. ಇದೀಗ ಹೆಣ್ಣು ಮಕ್ಕಳಿಗಾಗಿ ಮೊದಲ ಬಾರಿಗೆ ಟೂರ್ನಿಯೊಂದನ್ನು ಆಯೋಜಿಸಿದ್ದಾರೆ. ಈ ಟೂರ್ನಿಗೆ ವುಮೆನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಎಂದು ನಾಮಕರಣ ಮಾಡಿದ್ದು, ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಡಬ್ಲ್ಯುಡಬ್ಲ್ಯುಸಿಎಲ್‌ ಲೋಗೋ ಲಾಂಚ್ ಕಾರ್ಯಕ್ರಮ ನಡೆಯಿತು. ನಿರ್ಮಾಪಕ ಭಾಮ‌ ಹರೀಶ್ ಲೋಗೊ ಲಾಂಚ್ ಮಾಡಿ ಎಲ್ಲ ತಂಡಕ್ಕೂ ಆಲ್ ದಿ ಬೆಸ್ಟ್ ತಿಳಿಸಿದರು.

ಲೋಗೋ ಲಾಂಚ್ ಬಳಿಕ 7 ತಂಡಗಳಿಗೆ ಆಟಗಾರ್ತಿಯರ ಹರಾಜು‌ ಪ್ರಕ್ರಿಯೆ ನೇರವೇರಿದೆ. ಈಗಾಗಲೇ ಟೆಲಿವಿಷನ್ ಪ್ರೀಮಿಯರ್ ಲೀಗ್ ಹಾಗೂ IPT12 ಅಯೋಜನೆ ಮಾಡಿ ಯಶಸ್ಸು ಕಂಡಿರುವ N1 ಅಕಾಡೆಮಿಯ ಸುನೀಲ್ ಮೊದಲ ಬಾರಿಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಟೂರ್ನಮೆಂಟ್‌ನಲ್ಲಿ ಒಟ್ಟು 98 ನಟಿಯರು ಆಟ ಆಡಲಿದ್ದು, ಈ ತಿಂಗಳ ಕೊನೆಯಲ್ಲಿ ಜೆರ್ಸಿ ಲಾಂಚ್ ಮಾಡಿ, ನವೆಂಬರ್‌ನಲ್ಲಿ ಡಬ್ಲ್ಯುಡಬ್ಲ್ಯುಸಿಎಲ್‌ ಮ್ಯಾಚ್ ಆಡಿಸಲು ಸಕಲ ಸಿದ್ದತೆ ನಡೆಸಲಾಗಿದೆ.

ತಂಡಗಳು, ಓನರ್ ಹಾಗೂ ಕ್ಯಾಪ್ಟನ್

1. ಎವಿಆರ್‌ ಟಸ್ಕರ್ಸ್-ಅರವಿಂದ್-ವೆಂಕಟೇಶ್ ರೆಡ್ಡಿ-ಆರೋಹಿ ನಾರಾಯಣ್
2. ಎಂಆರ್ ಫ್ಯಾಂಥರ್ಸ್ಸ್-ಮಿಥುನ್ ರೆಡ್ಡಿ-ಮಲೈಕಾ ವಸೂಪಾಲ್
3. ಬುಲ್ ಸ್ಕ್ಯಾಡ್-ಮೋನಿಷ್-ಶಾನ್ವಿ ಶ್ರೀವಾಸ್ತವ
4. ವಿನ್ ಟೈಮ್ ರಾಕರ್ಸ್ಸ್-ಅನಿಲ್ ಕುಮಾರ್ ಬಿ.ಆರ್.-ಬೃಂದಾ ಆಚಾರ್ಯ
5. ಮಂಜು 11-ಮಂಜುನಾಥ್-ನಾಗಯ್ಯ-ಯಶ ಶಿವಕುಮಾರ್
6. ಬಯೋಟಾಪ್ ಲೈಫ್ ಸೇವಿಯರ್ಸ್-ಪ್ರಸನ್ನ-ವಿನು ಜೋಸ್-ಅಪೂರ್ವ
7. ಖುಷಿ 11-ಭೂಮಿ ಶೆಟ್ಟಿ

ಈ ಸುದ್ದಿಯನ್ನೂ ಓದಿ: Salman Khan : ಸಲ್ಮಾನ್ ಮನೆಗೆ ಗುಂಡಿನ ದಾಳಿ, ಆರೋಪಿ ವಿಕ್ಕಿ ಜಾಮೀನು ಅರ್ಜಿ ತಿರಸ್ಕೃತ