ಬೆಂಗಳೂರು: ʼಕೆಜಿಎಫ್ʼ (KGF) ಸರಣಿ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ (Rocking Star) ಯಶ್ (Yash) ಅವರನ್ನು ತೆರೆ ಮೇಲೆ ನೋಡಲು ಅಭಿಮಾನಗಳು ಕಾತರರಾಗಿದ್ದಾರೆ.ಯಶ್ ಮುಂದಿನ ಚಿತ್ರ ʼಟಾಕ್ಸಿಕ್ʼ (Toxic) ಮುಗಿಯುವ ಹಂತದಲ್ಲಿದೆ. ಹೀಗಾಗಿ ಚಿತ್ರ ಯಾವಾಗ ತೆರೆಗೆ ಬರುತ್ತದೆ ಎಂದು ಗೊತ್ತಿಲ್ಲ. ʼಕೆಜಿಎಫ್ʼ ಸೂಪರ್ ಹಿಟ್ ಚಿತ್ರದ ಬಳಿಕ ಯಶ್ ಸುದೀರ್ಘ ದಿನಗಳಿಂದ ಬೇರೆ ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ. ಯಾವುದೇ ಚಿತ್ರ ತೆರೆಗೆ ಬಂದಿಲ್ಲ. ಇಂದು (ಜ. 8) ರಾಕಿಂಗ್ ಸ್ಟಾರ್ ಯಶ್ ಅವರಿಗೆ ಜನ್ಮದಿನದ ಸಂಭ್ರಮ (Yash Birthday). ಹೀಗಾಗಿ ಯಶ್ ಆದಾಯ, ದುಬಾರಿ ಮನೆ, ಕಾರುಗಳ ಕುರಿತು ಅಭಿಮಾನಿಗಳು ಸರ್ಚ್ ಮಾಡುತ್ತಿದ್ದಾರೆ.
2000ನೇ ಇಸವಿಯಲ್ಲಿ ಟಿವಿ ಆರ್ಟಿಸ್ಟ್ ಆಗಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಯಶ್ ಬಳಿ ಮುಟ್ಟಿದೆಲ್ಲಾ ಚಿನ್ನ. ಸತತ ಪರಿಶ್ರಮದ ಮೂಲಕ ಕನ್ನಡ ಸಿನಿಮಾದ ಸ್ಟಾರ್ ಆಗಿ ಬೆಳೆದ ಯಶ್, ಅಭಿನಯ, ಡ್ಯಾನ್ಸ್, ಡೈಲಾಗ್ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ತೆರೆಯಿಂದಾಚೆಗೂ ಯಶ್ ಹಲವು ಸಾಮಾಜಿಕ ಕಾರ್ಯಗಳ ಮೂಲಕ ಜನರ ಪ್ರೀತಿಪಾತ್ರರಾಗಿದ್ದಾರೆ. ಸ್ಟಾಕ್ ಗೋ ವರದಿ ಪ್ರಕಾರ ಯಶ್ 500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ. ರಿಯಲ್ ಎಸ್ಟೇಟ್, ಹಲವು ಕಂಪನಿಗಳಲ್ಲಿ ಯಶ್ ಹೂಡಿಕೆ ಮಾಡಿದ್ದಾರೆ.
ಇದನ್ನೂ ಓದಿ: Salman Khan: ಸಲ್ಮಾನ್ ಖಾನ್ ಮನೆಗೆ ಮತ್ತಷ್ಟು ಭದ್ರತೆ ; ಬುಲೆಟ್ ಪ್ರೂಫ್ ಗಾಜು ಅಳವಡಿಕೆ
ಯಶ್ ಕಳೆದ ವರ್ಷ ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ ಕಾರು ಖರೀದಿಸಿದ್ದರು. ಇದರ ಜತೆಗೆ 85 ಲಕ್ಷ ರೂ. ಮೌಲ್ಯದ ಮರ್ಸಿಡಿಸ್ ಬೆಂಜ್ DLS 350D, ಇನ್ನು 78 ಲಕ್ಷ ರೂ. ಮೌಲ್ಯದ ಮರ್ಸಿಡಿಸ್ ಬೆಂಜ್ GLC 250D ಕಾರು, 80 ಲಕ್ಷ ರೂ. ಮೌಲ್ಯದ ಆಡಿ ಕ್ಯೂ7, ಇನ್ನು 70 ಲಕ್ಷ ರೂ. ಮೌಲ್ಯದ BMW 520D ಕಾರು, 70 ಲಕ್ಷ ರೂ. ಬೆಲೆಯ ರೇಂಜ್ ರೋವರ್ ಇವೋಕ್, 35 ಲಕ್ಷ ರೂ. ಮೌಲ್ಯದ ಪಜೆರೋ ಸ್ಪೋರ್ಟ್ಸ್ ಕಾರು ಹೊಂದಿದ್ದಾರೆ.
ರಾಕಿಂಗ್ ಸ್ಟಾರ್ ಸಂಭಾವನೆ
ಬಸ್ ಚಾಲಕನ ಮಗನಾದ ಯಶ್ ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಕಠಿಣ ಪರಿಶ್ರಮದಿಂದ ಇಷ್ಟು ಎತ್ತರಕ್ಕೆ ಬೆಳೆದಿರುವ ಯಶ್ ಅವರ ಮೊದಲ ಸಂಭಾವನೆ ನೂರುಗಳಲ್ಲಿತ್ತು. ಸದ್ಯದ ವರದಿಗಳ ಪ್ರಕಾರ, ಕೆಜಿಎಫ್ ಸರಣಿಗಳ ಬಳಿಕ ಯಶ್ ಸಿನಿಮಾವೊಂದಕ್ಕೆ 25 ರಿಂದ 30 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇದಲ್ಲದೇ ಸಿನಿಮಾ ನಿರ್ಮಾಣಕ್ಕೂ ಅವರು ಕೈಹಾಕಿದ್ದು, ನೂರಾರು ಕೋಟಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.
ಯಶ್ ಬೆಂಗಳೂರಿನಲ್ಲಿ ಆರು ಕೋಟಿ ರೂ. ಮೌಲ್ಯದ ಮನೆ ಹೊಂದಿದ್ದಾರೆ. ಜೊತೆಗೆ ಹುಟ್ಟೂರು ಹಾಸನದಲ್ಲಿ ಫಾರ್ಮ್‌ಹೌಸ್ ಸೇರಿದಂತೆ ಆಸ್ತಿ ಹೊಂದಿದ್ದಾರೆ. ಬೆಂಗಳೂರಿನ ಹೊಸಕೆರೆಯಲ್ಲಿ ವಿಶಾಲ ಮನೆ ಹೊಂದಿದ್ದಾರೆ. ಇದಲ್ಲದೇ ಗೋವಾದಲ್ಲೊಂದು ಮನೆ ಹಾಗೂ ಬೆಂಗಳೂರಿನ ತಾಜ್ ವೆಸ್ಟೆಂಡ್‌ನಲ್ಲಿ ಪ್ರತ್ಯೇಕ್ ರೂಮ್ ಇದೆ.
ಯಶ್ ಕಂಪನಿ
ರಾಕಿಂಗ್ ಸ್ಟಾರ್ ವಿಲ್ಲಾನ್ ಎಂಬ ಕಂಪನಿ ಸ್ಥಾಪಿಸಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಬಿಯಡೋ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆಂದು ಸ್ಟಾಕ್ ಗೋ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಯಶ್ ಅವರ ಬಳಿ 500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯಿದೆ ಎಂದು ಅಂದಾಜಿಸಲಾಗಿದೆ.
ಕೆಜಿಎಫ್ ಚಿತ್ರದ ಮೂಲಕ ಯಶ್ ಭಾರತೀಯ ಚಿತ್ರರಂಗ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಯಶ್ ಚಿತ್ರದ ಮೇಲೆ ಕೇವಲ ಸ್ಯಾಂಡಲ್‌ವುಡ್ ಮಾತ್ರವಲ್ಲ, ಭಾರತದ ಎಲ್ಲಾ ಚಿತ್ರರಂಗ ಕಣ್ಣಿಟ್ಟಿದೆ.