Thursday, 9th January 2025

Yash Birthday: ಸ್ಯಾಂಡಲ್‌ವುಡ್ ಅಣ್ತಮ್ಮ ನೀಡಿದ ಹಿಟ್​ ಡೈಲಾಗ್ಸ್​ ಇಲ್ಲಿವೆ

ಬೆಂಗಳೂರು: ಯಶ್ (Yash) ಸಿನಿಮಾಗಳಲ್ಲಿ ಹಾಡು, ಫೈಟ್‌ಗಳಿಗೆ ಯಾವ ಮಟ್ಟದ ಕ್ರೇಜ್ ಇರುತ್ತದೆಯೋ ಅವರ ಡೈಲಾಗ್‌ಗಳಿಗೂ (Dialogues) ಅಷ್ಟೇ ಮಹತ್ವ ಇರುತ್ತದೆ. ಅಭಿಮಾನಿಗಳು ಅವರ ಪಂಚಿಂಗ್ ಡೈಲಾಗ್‌ಗಳಿಗೆ ಕಾದಿರುತ್ತಾರೆ. ಚಿತ್ರಮಂದಿರಗಳಲ್ಲಿ ಯಶ್‌ ಪಂಚ್ ಡೈಲಾಗ್ ಹೊಡೆಯುತ್ತಿದ್ದರೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿರುತ್ತದೆ (Yash Birthday). ಕೆಲವೊಮ್ಮೆ ಅವರ ಸಿನಿಮಾಗಳು ಡೈಲಾಗ್‌ಗಳು ಚರ್ಚೆಯನ್ನೂ ಹುಟ್ಟು ಹಾಕಿವೆ. ಅದರಲ್ಲೂ ‘ಮಿಸ್ಟರ್ ಆ್ಯಂಡ್‌ ರಾಮಾಚಾರಿ’ ಚಿತ್ರದ ‘ನಂದೇ ಹವಾ’ ಡೈಲಾಗ್‌ ಭಾರೀ ಸೌಂಡ್ ಮಾಡಿತ್ತು. ಅವರ ಜನ್ಮದಿನದ ಪ್ರಯುಕ್ತ ಸಿನಿಮಾಗಳ ಫೇಮಸ್‌ ಡೈಲಾಗ್‌ಗಳ(Famous Dialogues) ವಿವರ ಇಲ್ಲಿದೆ.

ಡ್ರಾಮಾ

‘ಲಕ್ಕಂಡಿ ಕಡ್ಡಿಪುಡಿ ಲಕ್ಷಿಶನೋ ಬಕ್ಷಿಶನೋ’, ‘ಲಂಗು ಲಗಾಮು ಲವಣ ಫಕೀರ’, ‘ಲಂಗಾ ದಾವಣಿ ಹಾಕೋಳ್ಳೋ ಸಕೀರ,’ ‘ದೊಡ್ಡೋರು ಬಿಡಲ್ಲ, ಸಣ್ಣೋರು ಬಗ್ಗಲ್ಲ’, ‘ಕಾಲ್ ಕೆಜಿ ಬೆಣ್ಣೆ, ಬಾಯಲ್‌ ಹಾಕೋ ಸುಮ್ನೆ’,’ ವಾಲಾಡು ಗೊಂಬೆ ವಾಲಾಡು’, ‘ಬೀಯರ್‌ ಹಾಕ್ಕೊಂಡು ತೇಲಾಡು’.

​’ಮಾಸ್ಟರ್‌ ಪೀಸ್‌

‘ಕಾಟನ್‌ ಪೇಟೆ ಹುಡುಗ್ರು ಕಿಲಾಡಿ ಅಂತಾರೆ, ಕತ್ರಿಗುಪ್ಪೆ ಹುಡುಗ್ರು ಕಿಂಗ್ ಅಂತಾರೆ, ಶಿವಾಜಿ ನಗರ್ ಹುಡುಗ್ರು ಭಾಯ್ ಅಂತಾರೆ, ಬಸವೇಶ್ವರನಗರ್‌ ಹುಡುಗ್ರು ಬಾಸು ಅಂತಾರೆ. ಏನ್‌, ನಮ್ಮನ್‌ ಕಂಡ್ರೆ ಉರ್ಕೋಳೋರು ಒಬ್ರಾ, ಇಬ್ರಾ. ದುಷ್ಮನ್ ಕಹಾ ಹೈ ಅಂದ್ರೇ ಊರ್ ತುಂಬ ಹೈ’.

ಗಜಕೇಸರಿ

‘ಹುಲಿ ಬೇಟೆ ಹುಡ್ಕೊಂಡು ಹೋದ್ರು, ಬೇಟೇನೆ ಹುಲಿ ಮುಂದೆ ಬಂದ್ರು, ಎದೆ ಬಗೆಯೋದು ಹುಲಿನೇ’, ‘ನಾವು ವ್ಯವಸ್ಥೆನಾ ಬದಲಾಯಿಸೋಕೆ ಆಗಲ್ಲ. ನಾವು ಬದಲಾದರೆ ವ್ಯವಸ್ಥೆ ತಾನಾಗೇ ಬದಲಾಗುತ್ತೆ’.

ರಾಜಾಹುಲಿ

‘ಕಾಲೆಳೆಯೋರು ಯಾವಾಗಲೂ ಕಾಲ್‌ ಕೆಳಗೆ ಇರ್ತಾರೆ’, ‘ಪ್ರೀತಿ ಅಭಿಮಾನ ಇಟ್ಟಿರೋ ಜನಗಳು ಹೃದಯದಲ್ಲಿ ಇರ್ತಾರೆ… ಅಣ್ತಮ್ಮ, ಇಲ್ಲಿ ಯಾರು ಹೀರೋಗಳನ್ನು ಹುಟ್‌ಹಾಕಲ್ಲ. ನಮಗ್‌ನಾವೇ ಹೀರೋ ಆಗಬೇಕು… ಎದೆ ತೋರ್ಸೋಕೊಂಡು ಗುದ್ದಾಡೋನ್ಗೇ ಯಾರ್‌ ಯಾರ್ಗೆ, ಎಲ್ಲೆಲ್ಲೆ ಹೊಡೆದೆ ಅಂತ ಮೈಂಡ್ ಅಲ್ಲೇ ರೆಕಾರ್ಡ್‌ ಆಗಿರ್ತದೆ ಕಣಲೇ’

​’ಮಿಸ್ಟರ್ ಆ್ಯಂಡ್‌ ರಾಮಾಚಾರಿ’

‘ಸುನಾಮಿ, ಸುಂಟಗಾಳಿ, ಬಿರುಗಾಳಿ ಯಾವಗಾಲೋ ಒಂದ್ಸಲನೇ ಬರೋದು. ಅದು ಬರುತ್ತೆ ಅನ್ನಬೇಕಾದರೆ ಒಂದ್ ಭಯ ಇರತ್ತೆ. ಬಂದ್ ಹೋದ್ ಮೇಲೆ ಒಂದ್ ಹವಾ ಇರುತ್ತೆ. ನಾನ್ ಬರೋವರ್ಗೂ ಮಾತ್ರ ಬೇರೆಯವರ ಹವಾ, ಬಂದ್ಮೇಲೆ ನಂದೇ ಹವಾ.’

​’ಸಂತು ಸ್ಟ್ರೇಟ್ ಫಾರ್ವರ್ಡ್‌

‘ದೊಡ್ಡವರನ್ನು ಟಚ್ ಮಾಡೋದೇ ತಪ್ಪು. ಒಂದು ವೇಳೆ ಟಚ್ ಮಾಡಿದ್ರೂ, ಅದು ಅವರ ಕಾಲು ಆಗಿರ್ಬೇಕು, ಕಾಲರ್ ಅಲ್ಲ…. ನುಗ್ಗೋ ಬುಲೆಟ್‌ಗೆ ಎದುರುಗಡೆ ಯಾವನಿದ್ರೇನು? ನುಗ್ತಾ ಇರೋದೇ, ಎದೆ ಸೀಳ್ತಾ ಇರೋದೇ’.

​’ಕೆಜಿಎಫ್‌

‘ಒಂದ್‌ ಹೊಡೆದಾಟದಲ್ಲಿ ಯಾರು ಮೊದಲು ಹೊಡೆದರು ಅನ್ನೋದು ಲೆಕ್ಕಕ್‌ ಬರಲ್ಲ. ಯಾವನ್ ಮೊದ್ಲು ಕೆಳಗ್ ಬಿದ್ದ ಅನ್ನೋದೇ ಲೆಕ್ಕಕ್ಕೆ ಬರೋದು. ಯಾರೋ ಹತ್ತು ಜನನ್ನ ಹೊಡೆದು, ಡಾನ್ ಆದವನಲ್ಲಾ ಕಣ್ರೋ ನಾನು. ನಾನು ಹೊಡೆದಿರೋ ಹತ್ತು ಜನನೂ ಡಾನೇ…. ಇನ್ಮೆಲಿಂದ ಅವರ ಅಪ್ಪ ನಮ್ಮ ಮಾವ, ನಾನ್ ನಿಮ್ಮೆಲ್ಲರಿಗೂ ಭಾವ. ನಿಮ್ಮ ಅಕ್ಕನ್ನ ಚೆನ್ನಾಗ್‌ ನೋಡ್ಕೋಳ್ರೋ’

ಈ ಸುದ್ದಿಯನ್ನು ಓದಿ: Yash Love Story: ಸ್ಯಾಂಡಲ್‌ವುಡ್ ಗ್ರೇಟ್ ಪೇರ್ ರಾಮಾಚಾರಿ – ಮಾರ್ಗಿ; ರಾಧಿಕಾಗೆ ಪ್ರಪೋಸ್​ ಮಾಡಲು ಯಶ್ ಎಷ್ಟೆಲ್ಲಾ ಕಷ್ಟಪಟ್ಟಿದ್ರು ಗೊತ್ತಾ?

Leave a Reply

Your email address will not be published. Required fields are marked *