ನವ ದೆಹಲಿ: 2024ರಲ್ಲಿ ಬಾಲಿವುಡ್‌ನಿಂದ ಟಾಲಿವುಡ್ ವರೆಗೆ ಹಲವು ಸಿನಿಮಾಗಳು ಬಿಡುಗಡೆಯಾಗಿ ಬಿಗ್ ಕಲೆಕ್ಷನ್ ಮಾಡಿ ಸೂಪರ್ ಹಿಟ್ ಆಗಿವೆ. ಆದರೆ 2024 (Year Ender 2024) ರಲ್ಲಿ ಬಿಗ್ ಬಜೆಟ್‌ನ ಕೆಲವು ಬಾಲಿವುಡ್, ಟಾಲಿವುಡ್ ಸಿನಿಮಾಗಳು ಫ್ಲಾಪ್ ಆಗಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.
ಬಡೇ ಮಿಯಾನ್ ಚೋಟೆ ಮಿಯಾನ್
2024ರಲ್ಲಿ ಬಿಡುಗಡೆಯಾದ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯದ ಬಡೇ ಮಿಯಾನ್ ಚೋಟೆ ಮಿಯಾನ್ ಹೈ ಬಜೆಟ್ ಸಿನಿಮಾ ವಾಗಿದ್ದು ಇದು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಕೇವಲ 102.16 ಕೋಟಿ ರೂಪಾಯಿಗಳನ್ನು ಮಾತ್ರ ಗಳಿಸಿದೆ.ಈ ವರ್ಷದ ಅತಿದೊಡ್ಡ ಫ್ಲಾಪ್ ಸಿನಿಮಾದ ಪಟ್ಟಿಗೆ ಇದು ಸೇರಿದೆ.
ಚಾಂಪಿಯನ್
ಭಾರತದ ಮೊದಲ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ಮುರಳಿಕಾಂತ್ ಪೇಟ್ಕರ್ ಆಧಾರಿತ ಕಾರ್ತಿಕ್ ಆರ್ಯನ್ ಅಭಿನಯದ ಚಂದು ಚಾಂಪಿಯನ್ ಚಿತ್ರ ವಿಶ್ವದಾದ್ಯಂತ ಒಟ್ಟು ರೂ 88.14 ಕೋಟಿ ಗಳಿಸಿದ್ದು ಇದು ಕೂಡ ಈ ವರ್ಷದ ಫ್ಲಾಪ್ ಸಿನಿಮಾ ಆಗಿದೆ.
ಜಿಗ್ರಾ
ಆಲಿಯಾ ಭಟ್ ಮತ್ತು ವೇದಾಂಗ್ ರೈನಾ ಅವರ ಜಿಗ್ರಾ ಚಿತ್ರವು ಈ ವರ್ಷ ವಿಫಲವಾಗಿದ್ದು ಸುಮಾರು 80 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಕೇವಲ 55.05 ಕೋಟಿ ಗಳಿಸಿದೆ.
ಕಂಗುವ
ಸೂರ್ಯ, ಬಾಬಿ ಡಿಯೋಲ್ ಮತ್ತು ದಿಶಾ ಪಟಾನಿ ಅಭಿನಯದ ಕಂಗುವ ಚಿತ್ರ ನವೆಂಬರ್‌ನಲ್ಲಿ ರಿಲೀಸ್ ಆಗಿದ್ದು ಸುಮಾರು 300-350 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಆದರೆ ಈ ಸಿನಿಮಾ ಕೇವಲ 107.20 ಕೋಟಿ ರೂ ಗಳಿಸಿತ್ತು.
ಮೈದಾನ್
ಅಜಯ್ ದೇವಗನ್ ಅಭಿನಯದ ಮೈದಾನ್ ಸಿನಿಮಾವು ಈ ವರ್ಷದ ಫ್ಲಾಪ್ ಸಿನಿಮಾ ಪಟ್ಟಿಗೆ ಸೇರಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ಕಂಡಿದ್ದು ಇದು ವಿಶ್ವದಾದ್ಯಂತ ಕೇವಲ 68 ಕೋಟಿ ಗಳಿಸಿದೆ.
ಸರ್ಫಿರಾ
ಅಕ್ಷಯ್ ಕುಮಾರ್, ರಾಧಿಕಾ ಮದನ್, ಮತ್ತು ಪರೇಶ್ ರಾವಲ್ ಅವರ ಸರ್ಫಿರಾ ಚಿತ್ರ ವಿಶ್ವದಾದ್ಯಂತ ಕೇವಲ 30.02 ಕೋಟಿ ಗಳಿಸಿತು. ಈ ಚಿತ್ರವು ಸುಧಾ ಕೊಂಗರ ಅವರ ತಮಿಳಿನ ಸೂರರೈ ಪೊಟ್ರು ಚಿತ್ರದ ರಿಮೇಕ್ ಆಗಿತ್ತು.
ಲಾಲ್ ಸಲಾಮ್
ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಅವರ ತಮಿಳು ಚಿತ್ರ ಲಾಲ್ ಸಲಾಮ್ ಚಿತ್ರವು ಈ ವರ್ಷ ಹಿಟ್ ಆಗಿಲ್ಲ. ಇದರಲ್ಲಿ ರಜನಿಕಾಂತ್ ಅತಿಥಿ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು, 80-90 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಆದರೆ, ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ್ದು ಕೇವಲ 17.46 ಕೋಟಿ ರೂ.
ಇಂಡಿಯನ್ 2
2024ರಲ್ಲಿ ಫ್ಲಾಪ್ ಆದ ಸೌತ್ ಸಿನಿಮಾ ಮೆಗಾಸ್ಟಾರ್ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಸಿನಿಮಾ. ಈ ಚಿತ್ರ ಆರಂಭದಲ್ಲಿ ಹೆಚ್ಚು ಅದ್ದೂರಿ ಕಂಡರೂ 250 ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ ಕೇವಲ 81.32 ಕೋಟಿ ಮೊತ್ತ ಗಳಿಸಿದೆ.
ದೇವರ-ಭಾಗ 1
ನಟ ಜೂನಿಯರ್ ಎನ್‌ಟಿಆರ್ ಅಭಿನಯದ ಚಿತ್ರ ‘ದೇವರ-ಭಾಗ 1 ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡುತ್ತೆ ಎನ್ನುವ ಅಭಿಪ್ರಾಯ ಕೇಳಿಬಂದಿತ್ತು. ಆದರೆ 300 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರವೂ ಕಡಿಮೆ ಕಲೆಕ್ಷನ್ ಮಾಡಿದೆ.
ವೇಟ್ಟೈಯನ್
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ವೇಟ್ಟೈಯನ್’ ಚಿತ್ರವೂ ಈ ವರ್ಷ ಹಿಟ್ ಆಗಿಲ್ಲ. ಈ ಸಿನಿಮಾದ ಬಜೆಟ್ 160 ಕೋಟಿ ರೂಪಾಯಿಯಾಗಿತ್ತು. ಆದರೆ ಈ ಚಿತ್ರ ಕೇವಲ 146.81 ಕೋಟಿ ರೂಪಾಸಿನಿಮಾ ಗಳಿಸಿದೆ.
- ಜಾಹ್ನವಿ ಕಪೂರ್, ರೋಷನ್ ಮ್ಯಾಥ್ಯೂ, ಗುಲ್ಶನ್ ದೇವಯ್ಯ ಮತ್ತು ಆದಿಲ್ ಹುಸೇನ್ ಅಭಿನಯದ ಉಲಾಜ್ ಚಿತ್ರವು ಹಿಟ್ ಆಗಿಲ್ಲ. 35 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ವಿಶ್ವದಾದ್ಯಂತ ಕೇವಲ 11 ಕೋಟಿ ಗಳಿಸಿದೆ
- ಸಿದ್ಧಾರ್ಥ್ ಮಲ್ಹೋತ್ರಾ, ದಿಶಾ ಪಟಾನಿ ಮತ್ತು ರಾಶಿ ಖನ್ನಾ ಅಭಿನಯದ ಯೋಧ ಚಿತ್ರ 55 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ, ಆದರೆ ಅದು ಕೇವಲ 33.20 ಕೋಟಿ ಗಳಿಸಿದೆ.
- ಅಜಯ್ ದೇವಗನ್ ಮತ್ತು ಟಬು ಅಭಿನಯದ ಔರಾನ್ ಮೇ ಕಹಾನ್ ದಮ್ ಥಾ ಚಿತ್ರವು 100 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದು 12.91 ಕೋಟಿ ರೂಪಾಯಿ ಗಳಿಸಿತು.
- ಚಿಯಾನ್ ವಿಕ್ರಮ್ ಅಭಿನಯದ ‘ತಂಗಳನ್’ ಚಿತ್ರದ ಬಜೆಟ್ 135 ಕೋಟಿ ರೂಪಾಯಿ ಆಗಿತ್ತು. ಆದರೆ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೇವಲ 45 ಕೋಟಿ ಗಳಿಸಿದೆ. ಈ ಸಿನಿಮಾ ಕೂಡ 2024ರಲ್ಲಿ ಫ್ಲಾಪ್ ಆಗಿದೆ.