Tuesday, 15th October 2024

ಯೂಟ್ಯೂಬರ್ ಗಾಯತ್ರಿ ಅಪಘಾತದಲ್ಲಿ ನಿಧನ

ಹೈದರಾಬಾದ್: ಯೂಟ್ಯೂಬರ್, ಜೂನಿಯರ್​ ಆರ್ಟಿಸ್ಟ್ ಗಾಯತ್ರಿ ಹೈದರಾಬಾದ್​ನ ಗಚ್ಚಿಬೌಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಹೋಳಿ ಹಬ್ಬದ ದಿನ, ಗಾಯತ್ರಿ ತನ್ನ ಸ್ನೇಹಿತ ರೋಹಿತ್‌ನೊಂದಿಗೆ ಪಬ್‌ನಿಂದ ವಾಪಸ್ಸಾಗುತ್ತಿದ್ದ ವೇಳೆ ಹೈದರಾಬಾದ್​ನ ವಿಪ್ರೋ ಜಂಕ್ಷನ್‌ನಿಂದ ಗಚ್ಚಿಬೌಲಿಗೆ ತೆರಳುತ್ತಿದ್ದರು. ಈ ವೇಳೆ ಫುಟ್ ಪಾತ್ ಮೇಲೆ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗಾಯಗೊಂಡ ರೋಹಿತ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವನ ಸ್ಥತಿಯೂ ಚಿಂತಾಜನಕವಾಗಿದೆ ಎನ್ನಲಾಗಿದೆ.

ಇಬ್ಬರೂ ಪಾರ್ಟಿಯಲ್ಲಿ ಕೂಡ ಕಂಠಪೂರ್ತಿ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ಗಾಯತ್ರಿಯೇ ಕಾರು ಚಲಾಯಿಸುತ್ತಿದ್ದರು ಎಂಬ ಮಾಹಿತಿ ಇದೆ. ಹೆಚ್ಚು ವೇಗದಲ್ಲಿ ಕಾರನ್ನು ಚಲಾಯಿಸಿರುವುದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.