Wednesday, 25th December 2024

Viral News: 2024ರಲ್ಲಿ ಸ್ವಿಗ್ಗಿಗೆ ಆರ್ಡರ್‌ಗಳ ಸುಗ್ಗಿ- ನೀವು ಸ್ವಿಗ್ಗಿ ಪ್ರಿಯರಾಗಿದ್ರೆ ಈ ಇಂಟ್ರೆಸ್ಟಿಂಗ್ ಮಾಹಿತಿ ಮಿಸ್ ಮಾಡ್ಕೋಬೇಡಿ!

ಕೆಲಸ ಕಾರ್ಯದ ನಿಮಿತ್ತ ಮನೆಯವರಿಂದ ದೂರವಾಗಿ ನಗರ ಪ್ರದೇಶಗಳಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವವರಿಗೆ, ಕೆಲಸಕ್ಕೆ ಹೋಗುವ ಅರ್ಜೆಂಟಿನಲ್ಲಿ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವಿಲ್ಲದವರಿಗೆ, ರೂಂನಲ್ಲಿದ್ದು ಕಾಲೇಜಿಗೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ.. ಹೀಗೆ ವಿವಿಧ ವರ್ಗಗಳ ಜನರಿಗೆ ಅವರಿಚ್ಛೆಯ ಆಹಾರ ಪದಾರ್ಥಗಳನ್ನು ಕ್ಲಪ್ತ ಸಮಯದಲ್ಲಿ ಅವರಿರುವಲ್ಲಿಗೇ ತಲುಪಿಸುವ ಮೂಲಕ ‘ಆಹಾರ ಪೂರೈಕೆ’ಯ (Food Delivery) ಸೇವೆಯನ್ನು ಮಾಡುತ್ತಿರುವ ಸ್ವಿಗ್ಗಿ (Swiggy), ಝೊಮ್ಯಾಟೋದಂತಹ (Zomato) ಕಂಪೆನಿಗಳು ನಗರ ಪ್ರದೇಶದಲ್ಲಿ ಮಾತ್ರವಲ್ಲದೇ ಎಲ್ಲೆಡೆ ತಮ್ಮ ಸರ್ವಿಸ್ ಗಳಿಗೆ ಫೇಮಸ್ ಆಗಿದೆ. ಇದೀಗ 2024ರಲ್ಲಿ ಸ್ವಿಗ್ಗಿಯ ಫುಡ್ ಸಪ್ಲೈ ಮಾಹಿತಿ ಹೊರಬಿದ್ದಿದ್ದು, ಆಶ್ಚರ್ಯಕರ ಸಂಗತಿಯೆಂದರೆ ಬೆಂಗಳೂರಿನ ವ್ಯಕ್ತಿಯೊಬ್ಬರು ಈ ವರ್ಷ ಒಬ್ಬರೇ 49,900 ರೂಪಾಯಿಗಳ ಪಾಸ್ತಾ (Pasta) ಆರ್ಡರ್ ಮಾಡುವ ಮೂಲಕ ನಂಬರ್ ವನ್ ಸ್ಥಾನದಲ್ಲಿದ್ದಾರೆ! ಈ ಸುದ್ದಿ ಇದೀಗ ಸಿಕ್ಕಾಪಟ್ಟೆ ವೈರಲ್ (Viral News) ಆಗುತ್ತಿದೆ.

ಈ ಮಾಹಿತಿಗಳಲ್ಲಿ ಕುತೂಹಲಕಾರಿ ಅಂಶಗಳು ಬಯಲಾಗಿವೆ. ದೇಶಾದ್ಯಂತ ಫುಡ್ ಡೆಲಿವರಿ ಮಾಹಿತಿಗಳಿಗೆ ಹೋಲಿಸಿದರೆ ಬೆಂಗಳೂರಿನ (Bengaluru) ಈ ವ್ಯಕ್ತಿಯ ಆರ್ಡರೇ ಮೊದಲ ಸ್ಥಾನದಲ್ಲಿರುವುದು ವಿಶೇಷವಾಗಿದೆ. ಇನ್ನು, ಸ್ವಿಗ್ಗಿ ಕಂಪೆನಿಯ ವಾರ್ಷಿಕ ವಹಿವಾಟು ಮಾಹಿತಿಯಲ್ಲಿ ಹಲವಾರು ಕುತೂಹಲಕಾರಿ ಅಂಶಗಳು ಬಯಲಾಗಿವೆ.

ಹಾಗಾದ್ರೆ ಸ್ವಿಗ್ಗಿಯ ವಾರ್ಷಿಕ ಮಾಹಿತಿ ವರದಿಯಲ್ಲೇನಿದೆ?

ಆರ್ಡರ್ ಪಡೆದ ಫುಡ್ ಐಟಂಗಳ ಸಾಲಿನಲ್ಲಿ ಬಿರಿಯಾನಿ(Biryani) ನಂಬರ್ ವನ್ ಸ್ಥಾನದಲ್ಲಿದೆ. ಪ್ರತಿ ನಿಮಿಷಕ್ಕೆ 158 ಆರ್ಡರ್‌ಗಳಂತೆ ಒಟ್ಟು 83 ಮಿಲಿಯನ್ ಬಿರಿಯಾನಿಗಳನ್ನು ದೇಶಾದ್ಯಂತ ಸ್ವಿಗ್ಗಿ ಡೆಲಿವರಿ ಬಾಯ್ಸ್ ತಮ್ಮ ಗ್ರಾಹಕರಿಗೆ ತಲುಪಿಸಿದ್ದಾರೆ. ಅಂದರೆ, ಪ್ರತೀ ಸೆಕೆಂಡಿಗೆ 2 ಬಿರಿಯಾನಿಗಳಿಂತೆ ಡೆಲಿವರಿಯಾಗಿದೆ.

ಇನ್ನು ಫುಡ್ ಐಟಂಗಳಲ್ಲಿ ಎರಡನೇ ಸ್ಥಾನ ದೋಸೆಯ (Dosa) ಪಾಲಾಗಿದೆ! ದೇಶಾದ್ಯಂತ ಉಪಹಾರದ ಆಹಾರವಾಗಿ ಗ್ರಾಹಕರು ಸ್ವಿಗ್ಗಿ ಮೂಲಕ ದೋಸೆಯನ್ನೇ ಆರ್ಡರ್ ಮಾಡಿದ್ದು 2024ರಲ್ಲಿ 23 ಮಿಲಿಯನ್ ದೋಸೆ ಆರ್ಡರ್ ಸ್ವಿಗ್ಗಿಗೆ ಬಂದಿದೆ.

ಇನ್ನು ಡೆಸೆರ್ಟ್ ಗಳ ವಿಷಯಕ್ಕೆ ಬರೋದಾದ್ರೆ, ರಸ್ ಮಲಾಯಿ (Rasmalai ) ಮತ್ತು ಸೀತಾಫಲ ಐಸ್ ಕ್ರೀಂ (Sitaphal ice cream) ಫಾಸ್ಟಾಗಿ ಡೆಲಿವರಿಗೊಂಡ ಐಟಂಗಳ ಸ್ಥಾನದಲ್ಲಿ ಟಾಪ್ ಪ್ಲೇಸ್ ಅಲಂಕರಿಸಿವೆ. ಪ್ರತೀ 10 ನಿಮಿಷಗಳಿಗೊಮ್ಮೆ ಈ ಡೆಸೆರ್ಟ್ ಗಳು ಫುಡ್ ಪ್ರಿಯರಿಗೆ ಡೆಲಿವರಿಗೊಂಡಿವೆ. ಇನ್ನು, ಊಟದ ವಿಚಾರಕ್ಕ ಬಂದರೆ 215 ಮಿಲಿಯನ್ ಡಿನ್ನರ್ ಡೆಲಿವರಿಗೊಂಡಿದೆ.

ಯಾವ ನಗರಗಳಲ್ಲಿ ಯಾವ ಫುಡ್ ಐಟಂಗೆ ಹೆಚ್ಚಿನ ಡಿಮ್ಯಾಂಡ್ ಬಂದಿತ್ತು ಅನ್ನೋದನ್ನು ನೋಡೋದಾದ್ರೆ, ರಾಷ್ಟ್ರ ರಾಜಧಾನಿ ದೆಹಲಿ (Delhi) ಭಾಗದಲ್ಲಿ ಛೋಲೆ ಭಟುರೆ (Chole Bhature) ಹೆಚ್ಚಾಗಿ ಆರ್ಡರ್ ಆಗಿದ್ದರೆ, ಚಂಡೀಗಢದ (Chandigarh) ಗ್ರಾಹಕರು ಆಲೂ ಪರೋಟವನ್ನು (Aloo Parantha) ಹೆಚ್ಚಾಗಿ ಲೈಕ್ ಮಾಡಿದ್ದಾರೆ. ಇನ್ನು, ಕೊಲ್ಕೊತ್ತಾದವರ (Kolkata) ಫೆವರಿಟ್ ಕಚೋರಿ (Kachoris) ಟಾಪ್ ಸ್ಥಾನವನ್ನಲಂಕರಿಸಿದೆ.

ಸ್ವಿಗ್ಗಿ ಈ ವರ್ಷ ದೇಶಾದ್ಯಂತ ಡೆಲಿವರಿ ಮಾಡಿದ ಫುಡ್ ಐಟಂಗಳಲ್ಲಿ ಅತೀ ಶೀಘ್ರವಾಗಿ ಗ್ರಾಹಕರನ್ನು ತಲುಪಿದ್ದು ಐಸ್ ಕ್ರೀಂ (Ice Cream) ಆಗಿದ್ದು, ಬಿಕಾನೇರ್ ನ (Bikaner) ಗ್ರಾಹಕರೊಬ್ಬರಿಗೆ ಕೇವಲ 3 ನಿಮಿಷದಲ್ಲಿ ಐಸ್ ಕ್ರೀಂ ತಲುಪಿಸಿದ್ದಾರೆ ಸ್ವಿಗ್ಗಿ ಡೆಲಿವರಿ ಬಾಯ್ಸ್.

ಈ ಸುದ್ದಿಯನ್ನೂ ಓದಿ: Dalit Boy Suicide: ಬರ್ತ್ ಡೇ ಪಾರ್ಟಿಗೆಂದು ಕರೆದು ವಿವಸ್ತ್ರಗೊಳಿಸಿ‌ ಹಲ್ಲೆ; ನೊಂದ ಯುವಕ ಆತ್ಮಹತ್ಯೆ

ಇನ್ನು ಸ್ನ್ಯಾಕ್ಸ್ ಐಟಂಗಳಲ್ಲಿ(Snacks Item) ಚಿಕನ್ ರೋಲ್ (Chicken Roll) ಮೊದಲ ಸ್ಥಾನದಲ್ಲಿದೆ. 2.48 ಮಿಲಿಯನ್ ಚಿಕನ್ ರೋಲ್ ಗ್ರಾಹಕರಿಗೆ ಡೆಲಿವರಿಯಾಗಿದೆ. ಇನ್ನು ಫುಡ್ಡಿಗಳ ಲೇಟ್ ನೈಟ್ ಫೆವರಿಟ್ ನಲ್ಲಿ ಚಿಕನ್ ಬರ್ಗರ್ (Chicken Burger) ಮೊದಲ ಸ್ಥಾನದಲ್ಲಿದ್ದು, ಮಧ್ಯರಾತ್ರಿಯಿಂದ ನಡುರಾತ್ರಿ 2 ಗಂಟೆಯವರೆಗೆ 1.84 ಮಿಲಿಯನ್ ಆರ್ಡರ್ ಡೆಲಿವರಿಯಾಗಿದೆ. ದೆಹಲಿಯ ಗ್ರಾಹಕರೊಬ್ಬರು ಏಕಕಾಲದಲ್ಲಿ 250 ನೀರುಳ್ಳಿ ಪಿಜ್ಹಾ (Onion Pizza) ಆರ್ಡರ್ ಮಾಡಿರುವುದು ಇದೀಗ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಸಿಗ್ಗಿಯ ಡೆಲಿವರಿ ಪಾರ್ಟನರ್ ಗಳು 2024ರಲ್ಲಿ ದೇಶಾದ್ಯಂತ 1.96 ಬಿಲಿಯನ್ ಕಿಲೋ ಮೀಟರ್ ಗಳಷ್ಟು ಸಂಚರಿಸಿ ತಮ್ಮ ಗ್ರಾಹಕರಿಗೆ ಅವರಿಷ್ಟದ ಆಹಾರ ಪದಾರ್ಥಗಳನ್ನು ಡೆಲಿವರಿ ಮಾಡಿದ್ದಾರೆ. ಇದು ಕಾಶ್ಮೀರದಿಂದ (Kashmir) ಕನ್ಯಾಕುಮಾರಿಯವರೆಗೆ(Kanyakumari) 5,33,000 ಟ್ರಿಪ್ ಗಳಿಗೆ ಸಮ!

ಇನ್ನು ಸ್ವಿಗ್ಗಿಯ ಟಾಪ್ ಪರ್ಫಾರ್ಮರ್ ಗಳ ಪೈಕಿ ಮುಂಬಯಿನ (Mumbai) ಕಪಿಲ್ ಕುಮಾರ್ ಪಾಂಡೆ 10,703 ಡೆಲಿವರಿ ಪೂರ್ಣಗೊಳಿಸಿದ್ದರೆ, ಕೊಯಂಬತ್ತೂರಿನ (Coimbatore) ಕಾಲೀಸ್ವರಿ ಎಂ. 6,658 ಡೆಲಿವರಿಗಳನ್ನು ಕಂಪ್ಲೀಟ್ ಮಾಡುವ ಮೂಲಕ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ.

ಆಲ್ಕೋಹಾಲ್ (alcohol) ಡೆಲಿವರಿಯಲ್ಲಿ ಬೆಂಗಳೂರು 289,000 ಆರ್ಡರ್ ಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ ದೆಹಲಿ 96,000 ಡೆಲಿವರಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ರೊಮ್ಯಾಂಟಿಕ್ ಡೈನಿಂಗ್ (Romantic dining) ಆರ್ಡರ್ ಗಳು ಏರುಮುಖವಾಗಿದ್ದು ‘ನಾವಿಬ್ಬರು ಮಾತ್ರ’ದಲ್ಲಿ 2.35 ಮಿಲಿಯನ್ ರಿಸರ್ವೇಶನ್ ಆಗಿದೆ. ಇದರಲ್ಲೂ ಬೆಂಗಳೂರು (4 ಲಕ್ಷದ 86 ಸಾವಿರ) ಪ್ರಥಮ ಸ್ಥಾನದಲ್ಲಿದ್ದರೆ, ಜೈಪುರ (64 ಸಾವಿರ) ಎರಡನೇ ಸ್ಥಾನದಲ್ಲಿದೆ.