ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KKR vs RR: ದುರ್ಬಲ ರಾಜಸ್ಥಾನ್‌ ವಿರುದ್ಧ ಕೆಕೆಆರ್‌ ಕಾದಾಟ

ರಾಜಸ್ಥಾನ್‌ ತಂಡಕ್ಕೆ ಈ ಬಾರಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 3 ಗೆಲುವು, 8ರಲ್ಲಿ ಸೋತಿರುವ ರಾಜಸ್ಥಾನ್‌ ಈಗಾಗಲೆ ಪ್ಲೇ ಆಫ್‌​ ರೇಸ್​ನಿಂದ ಹೊರಬಿದ್ದಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಾದರೂ ಗೆದ್ದು ಕನಿಷ್ಠ ಕೊನೇ ಸ್ಥಾನದಿಂದ ಪಾರಾಗುವ ಅವಕಾಶವಷ್ಟೇ ರಾಜಸ್ಥಾನ್‌ ಮುಂದಿದೆ.

ದುರ್ಬಲ ರಾಜಸ್ಥಾನ್‌ ವಿರುದ್ಧ ಕೆಕೆಆರ್‌ ಕಾದಾಟ

Profile Abhilash BC May 3, 2025 12:04 PM

ಕೋಲ್ಕತಾ: ಪ್ಲೇ-ಆಫ್‌ ಪ್ರವೇಶ ಪಡೆಯಲು ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಅಜಿಂಕ್ಯ ರಹಾನೆ(Ajinkya Rahane) ಸಾರಥ್ಯದ ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ತವರಿನಲ್ಲಿ ಭಾನುವಾರ ನಡೆಯುವ ಐಪಿಎಲ್(IPL 2025)​ 18ನೇ ಆವೃತ್ತಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌(KKR vs RR) ವಿರುದ್ಧ ಕಣಕ್ಕಿಳಿಯಲಿದೆ. ಇದು ಹಗಲು ಪಂದ್ಯವಾಗಿದೆ. ಕೆಕೆಆರ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರುವ ಹಂಬಲದಲ್ಲಿದ್ದರೆ, ಈಗಾಗಲೆ ಪ್ರಶಸ್ತಿ ರೇಸ್​ನಿಂದ ಹೊರಬಿದ್ದಿರುವ ರಾಜಸ್ಥಾನ್‌ಗೆ ಪಡೆ ಸಮಾಧಾನಕರ ಗೆಲುವಿನ ನಿರೀಕ್ಷೆಯಲ್ಲಿದೆ.

ಕೆಕೆಆರ್‌ ತಂಡ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 5 ಸೋಲಿನೊಂದಿಗೆ 9 ಅಂಕ ಕಲೆಹಾಕಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. 5ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸುವ ಮೂಲಕ ಪ್ಲೇಆಫ್​ ಪ್ರವೇಶವನ್ನೂ ಜೀವಂತವಿರಿಸುವ ಅವಕಾಶ ಕೆಕೆಆರ್‌ ಮುಂದಿದೆ.

ಮತ್ತೊಂದೆಡೆ ರಾಜಸ್ಥಾನ್‌ ತಂಡಕ್ಕೆ ಈ ಬಾರಿ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 3 ಗೆಲುವು, 8ರಲ್ಲಿ ಸೋತಿರುವ ರಾಜಸ್ಥಾನ್‌ ಈಗಾಗಲೆ ಪ್ಲೇ ಆಫ್‌​ ರೇಸ್​ನಿಂದ ಹೊರಬಿದ್ದಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಾದರೂ ಗೆದ್ದು ಕನಿಷ್ಠ ಕೊನೇ ಸ್ಥಾನದಿಂದ ಪಾರಾಗುವ ಅವಕಾಶವಷ್ಟೇ ರಾಜಸ್ಥಾನ್‌ ಮುಂದಿದೆ. ಜತೆಗೆ ಇತರ ಕೆಲ ತಂಡಗಳ ಪ್ಲೇಆಫ್​ ಲೆಕ್ಕಾಚಾರವನ್ನು ತಪ್ಪಿಸಲು ಪ್ರಯತ್ನಿಸಬಹುದಾಗಿದೆ. ಹರಾಜಿನಲ್ಲಿ ವಿದೇಶಿ ಆಟಗಾರರನ್ನು ಕೈ ಬಿಟ್ಟು ದೇಶೀಯ ಆಟಗಾರರಿಗಷ್ಟೇ ಮಣೆ ಹಾಕಿದ್ದು ರಾಜಸ್ಥಾನ್‌ ತಂಡದ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣ.



ಮುಖಾಮುಖಿ

ರಾಜಸ್ಥಾನ್‌ ಮತ್ತು ಕೆಕೆಆರ್‌ ತಂಡಗಳು ಇದುವರೆಗಿನ ಐಪಿಎಲ್‌ನಲ್ಲಿ 31 ಪಂದ್ಯಗಳನ್ನಾಡಿದ್ದು, ಈ ಪೈಕಿ ಕೆಕೆಆರ್‌ 15 ಪಂದ್ಯ ಗೆದ್ದಿದ್ದರೆ, ರಾಜಸ್ಥಾನ್‌ 14 ಪಂದ್ಯ ಜಯಿಸಿದೆ. 2 ಪಂದ್ಯ ಫಲಿತಾಂಶ ಕಂಡಿಲ್ಲ. ಹಾಲಿ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಕೆಕೆಆರ್‌ 8 ವಿಕೆಟ್‌ ಅಂತರದ ಗೆಲುವು ಸಾಧಿಸಿತ್ತು.

ಇದನ್ನೂ ಓದಿ IPL 2025: ಐಪಿಎಲ್‌ನಲ್ಲಿ 4 ಸಾವಿರ ರನ್‌ ಪೂರೈಸಿ ಎಲೈಟ್‌ ಪಟ್ಟಿ ಸೇರಿದ ಬಟ್ಲರ್‌

ಸಂಭಾವ್ಯ ತಂಡಗಳು

ರಾಜಸ್ಥಾನ್‌ ರಾಯಲ್ಸ್‌: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್ (ವಿ.ಕೀ.), ಶಿಮ್ರಾನ್ ಹೆಟ್ಮೆಯರ್, ಜೋಫ್ರಾ ಆರ್ಚರ್, ಮಹೇಶ್ ತೀಕ್ಷಣ, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್, ಫಜಲ್ಹಕ್ ಫಾರೂಕಿ.

ಕೆಕೆಆರ್‌: ರಹಮಾನುಲ್ಲಾ ಗುರ್ಬಾಜ್ (ವಿ.ಕೀ.), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರೋವ್ಮನ್ ಪೊವೆಲ್, ಹರ್ಷಿತ್ ರಾಣಾ, ಅನುಕುಲ್ ರಾಯ್, ವರುಣ್ ಚಕ್ರವರ್ತಿ.