ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ಡೊನಾಲ್ಡ್‌ ಟ್ರಂಪ್‌ ಪೋಪ್‌ ಆಗ್ತಾರಾ? ಏನಿದು ವೈರಲ್‌ ಆದ ಪೋಸ್ಟ್‌ !

ಕೆಲ ದಿನಗಳ ಹಿಂದೆ ಪೋಪ್ ಫ್ರಾನ್ಸಿಸ್ ಅವರು ನಿಧರಾಗಿದ್ದಾರೆ. ಆ ಬಳಿಕ ಮುಂದಿನ ಪೋಪ್‌ ಯಾರಾಗುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಶನಿವಾರ ಪಾಪಲ್ ಉಡುಪಿನಲ್ಲಿ ಧರಿಸಿರುವ ಕೃತಕ ಬುದ್ಧಿಮತ್ತೆ (AI) ಆಧಾರಿತ ಚಿತ್ರವನ್ನು ಅವರೇ ಪೋಸ್ಟ್‌ ಮಾಡಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಮುಂದಿನ ಪೋಪ್‌ ಆಗ್ತಾರಾ?

Profile Vishakha Bhat May 3, 2025 11:13 AM

ವಾಟಿಕನ್‌ ಸಿಟಿ: ಕೆಲ ದಿನಗಳ ಹಿಂದೆ ಪೋಪ್ ಫ್ರಾನ್ಸಿಸ್ ಅವರು ನಿಧರಾಗಿದ್ದಾರೆ. ಆ ಬಳಿಕ ಮುಂದಿನ ಪೋಪ್‌ ಯಾರಾಗುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಶನಿವಾರ ಪಾಪಲ್ ಉಡುಪಿನಲ್ಲಿ ಧರಿಸಿರುವ ಕೃತಕ ಬುದ್ಧಿಮತ್ತೆ (AI) ಆಧಾರಿತ ಚಿತ್ರವನ್ನು ಅವರೇ ಪೋಸ್ಟ್‌ ಮಾಡಿದ್ದಾರೆ. ಈ ಹಿಂದೆ ಟ್ರಂಪ್‌ ಅವರ ಬಳಿ ಮುಂದಿನ ಪೋಪ್‌ ಯಾರಾಗಬೇಕು ಎಂದು ಕೇಳಿದಾಗ ನಗುತ್ತಾ ನಾನೇ ಮುಂದಿನ ಪೋಪ್‌ ಎಂದು ಹೇಳಿದ್ದರು. ನಾನು ಪೋಪ್ ಆಗಲು ಬಯಸುತ್ತೇನೆ," ಎಂದು ತಮಾಷೆ ಮಾಡಿದ್ದರು.

ಇದೀಗ್‌ ಪೋಪ್‌ ಅವತಾರದಲ್ಲಿ ತಮ್ಮದೇ ಫೋಟೋವನ್ನು ಶೇರ್‌ ಮಾಡಿದ್ದಾರೆ. ಟ್ರಂಪ್‌ ಅವರ ಈ ಫೋಟೋವನ್ನು ನೋಡಿದ ನೆಟ್ಟಿಗರು , ಅವರ ಕಾಲೆಳೆದರು. ಹಲವರು ಕಮೆಂಟ್‌ ಮಾಡಿ ವ್ಯಾಟಿಕನ್ ಅನ್ನು ಮತ್ತೊಮ್ಮೆ ಶ್ರೇಷ್ಠವನ್ನಾಗಿ ಮಾಡಿ ಎಂದು ಹೇಳಿದ್ದಾರೆ. ಸರ್ವಾಧಿಕಾರಿಯಿಂದ ಶಾಂತಿಯೆಡೆಗೆ ನಡಿಗೆ ಎಂದು ಹಲವರು ತಮಾಷೆ ಮಾಡಿದರು. ಇನ್ನೂ ಕೆಲವರು ಟ್ರಂಪ್ ಪೋಪ್ ಫ್ರಾನ್ಸಿಸ್ ಅವರ ಸಾವನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. "ಇದು ಚರ್ಚ್ ಮತ್ತು ದೇವರಿಗೆ ಅಗೌರವ ತೋರಿದಂತಾಗುತ್ತದೆ, ಟ್ರಂಪ್‌ ಕ್ರಿಸ್ತ ವಿರೋಧಿ ಎಂದು ವ್ಯಕ್ತಿಯೊಬ್ಬರು ಹೇಳಿದರು.

ಕೆಲ ದಿನಗಳ ಹಿಂದೆ ಟ್ರಂಪ್‌ ಪೋಪ್‌ ಅವರ ಉತ್ತರಾಧಿಕಾರಿಯಾಗಲು ಕಾರ್ಡಿನಲ್ ಒಬ್ಬರ ಹೆಸರನ್ನು ಸೂಚಿಸಿದ್ದರು. ಆ ಸ್ಥಾನಕ್ಕೆ ನಮ್ಮಲ್ಲಿ ಒಬ್ಬರಿದ್ದಾರೆ. ಅವರು ನ್ಯೂಯಾರ್ಕ್‌ನಲ್ಲಿ ಕಾರ್ಡಿನಲ್‌ ಆಗಿದ್ದಾರೆ. ನ್ಯೂಯಾರ್ಕ್‌ನ ಆರ್ಚ್‌ಬಿಷಪ್ ಕಾರ್ಡಿನಲ್ ತಿಮೋತಿ ಡೋಲನ್ ಅವರನ್ನು ಉಲ್ಲೇಖಿಸಿ ಈ ಮಾತುಗಳನ್ನಾಡಿದ್ದರು.

ಈ ಸುದ್ದಿಯನ್ನೂ ಓದಿ: Pahalgam terror attack: ಪಹಲ್ಗಾಮ್‌ ಉಗ್ರರ ದಾಳಿ; ಡೊನಾಲ್ಡ್‌ ಟ್ರಂಪ್‌ ಖಂಡನೆ

ಪೋಪ್‌ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಏಪ್ರಿಲ್ 21 ರಂದು ತಮ್ಮ 88 ನೇ ವಯಸ್ಸಿನಲ್ಲಿ ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಮಾರ್ಚ್ 2013 ರಲ್ಲಿ ಆಯ್ಕೆಯಾದಾಗಿನಿಂದ ಪೋಪ್ ಫ್ರಾನ್ಸಿಸ್ ಹನ್ನೆರಡು ವರ್ಷಗಳ ಕಾಲ ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಪೋಪ್ ಫ್ರಾನ್ಸಿಸ್ ಅವರ ನಿಧನದ ನಂತರ ಸುಮಾರು 2,000 ವರ್ಷಗಳಷ್ಟು ಹಳೆಯದಾದ ಈ ಸಂಸ್ಥೆಯು ಹೊಸ ಪೋಪ್‌ ಹುಡುಕುತ್ತಿದೆ. ಕಳೆದ ಕೆಲ ತಿಂಗಳಿನಿಂದ ಪೋಪ್‌ ಅವರ ಆರೋಗ್ಯದಲ್ಲಿ ವತ್ಯಾಸ ಕಂಡು ಬರುತ್ತಿತ್ತು. ಫೆಬ್ರವರಿ 14 ರಂದು ಬ್ರಾಂಕೈಟಿಸ್ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ನ್ಯುಮೋನಿಯಾ ಇರುವುದು ಧೃಡಪಟ್ಟಿತ್ತು. ಆದಾದ ಬಳಿಕ ಅವರು ಮೃತಪಟ್ಟಿದ್ದಾರೆ.