ಪಟ್ನ : ಸಿನಿಮೀಯ ರೀತಿಯಲ್ಲಿ ಗನ್ಗಳನ್ನು ಹಿಡಿದ ದರೋಡೆಕೋರರು ಬ್ಯಾಂಕಿಗೆ ಲಗ್ಗೆ ಇಟ್ಟು, 1.19 ಕೋಟಿ ರೂಪಾಯಿ ಹಣ ದೋಚಿರುವ ಪ್ರಕರಣ ಬಿಹಾರದಿಂದ ವರದಿಯಾಗಿದೆ. ಕೇಂದ್ರದ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರ ನಿವಾಸದ ಬಳಿಯಲ್ಲೇ ನಡೆದಿದೆ.
ಬಿಹಾರದ ಹಾಜಿಪುರದಲ್ಲಿನ ಎಚ್ಡಿಎಫ್ಸಿ ಬ್ಯಾಂಕ್ನ ಜಾದುಹ ಶಾಖೆ ಸಾರ್ವಜನಿಕರ ಸೇವೆಗೆ ತೆರೆದ ಸ್ವಲ್ಪ ಸಮಯದಲ್ಲೇ 5 ಜನ ಬೈಕ್ಗಳಲ್ಲಿ ಬಂದು, ಬ್ಯಾಂಕಿಗೆ ನುಗ್ಗಿ ಬೆದರಿಸಿ ಕ್ಯಾಶ್ ರೂಮಿನಿಂದ 1.19 ಕೋಟಿ ರೂಪಾಯಿಗಳನ್ನು ಮೂಟೆಗಳಿಗೆ ತುಂಬಿಸಿಕೊಂಡು ಪಲಾಯನ ಮಾಡಿದರು ಎನ್ನಲಾಗಿದೆ.
ಹಣದ ಮೂಟೆಗಳನ್ನು ತಮ್ಮ ಭುಜದ ಮೇಲೆ ಎತ್ತಿಕೊಂಡು ಬ್ಯಾಂಕ್ನಿಂದ ಹೊರಹೋಗುವ ಸಮಯದಲ್ಲಿ ಈ ಖದೀಮರ ಮುಖಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.