Saturday, 14th December 2024

1.2 ಲಕ್ಷ ಹೊಸ ಕರೋನಾ ಪ್ರಕರಣ ದಾಖಲು

#covid

ನವದೆಹಲಿ : ದೇಶದಲ್ಲಿ ಕರೋನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ, ಭಾರತವು ಕೋವಿಡ್-19 ರ 1.2 ಲಕ್ಷ ಹೊಸ ಪ್ರಕರಣಗಳನ್ನು ದಾಖಲಿಸಿದೆ. ಇದು ಕಳೆದ 58 ದಿನಗಳಲ್ಲಿ ಪ್ರಕರಣಗಳ ಕನಿಷ್ಠ ಏಕ ದಿನದ ಹೆಚ್ಚಳವಾಗಿದೆ.

ದೇಶದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳು 15,55,248. ದೇಶಾದ್ಯಂತ ಕೋವಿಡ್ ಸೋಂಕಿನಿಂದ ಈವರೆಗೆ ೨.೬೭ ಕೋಟಿಗೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ 1,97,894 ಜನರು ಚೇತರಿಸಿಕೊಂಡಿದ್ದಾರೆ.