Sunday, 24th November 2024

10,256 ಹೊಸ ಕರೋನಾ ಪ್ರಕರಣ ಪತ್ತೆ

#corona

ವದೆಹಲಿ: ದೇಶದಲ್ಲಿ ಕೋವಿಡ್ ಸಾಂಕ್ರಾಮಿಕದ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 10,256 ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿವೆ.

24 ಗಂಟೆಗಳಲ್ಲಿ ದೇಶದಾದ್ಯಂತ 10,256 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಆ ಮೂಲಕ ದೇಶದಲ್ಲಿ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆ 4,43,89,176ಕ್ಕೆ ಏರಿಕೆ ಯಾಗಿದೆ.

ಇದೇ ಅವಧಿಯಲ್ಲಿ 68 ಮಂದಿ ಸೋಂಕಿತರು ಮೃತಪಟ್ಟಿದ್ದು, ಈ ಪೈಕಿ ಕೇರಳ ರಾಜ್ಯ ವೊಂದರಲ್ಲೇ 29 ಸಾವುಗಳು ವರದಿ ಯಾಗಿದೆ.

ಮಹಾರಾಷ್ಟ್ರದಿಂದ ಆರು, ರಾಜಸ್ಥಾನ ಮತ್ತು ದೆಹಲಿಯಿಂದ ತಲಾ ನಾಲ್ಕು, ಛತ್ತೀಸ್‌ ಗಢ ಮತ್ತು ಕರ್ನಾಟಕದಿಂದ ತಲಾ ಮೂರು, ಜಮ್ಮು ಮತ್ತು ಕಾಶ್ಮೀರ, ಕೇರಳ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಿಂದ ತಲಾ ಇಬ್ಬರು ಸೋಂಕಿಗೆ ಬಲಿಯಾಗಿ ದ್ದಾರೆ. ಆ ಮೂಲಕ ಸೋಂಕಿಗೆ ಬಲಿಯಾದವರ ಸಂಖ್ಯೆ 5,27,556ಕ್ಕೆ ಏರಿಕೆಯಾಗಿದೆ.

24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 13,528 ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 90,707ಕ್ಕೆ ಏರಿಕೆಯಾಗಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ 2.43ಕ್ಕೆ ಹೆಚ್ಚಿದೆ.

ಒಟ್ಟು 88.43 ಕೋಟಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 4,22,322 ಪರೀಕ್ಷೆಗಳನ್ನು ನಡೆಸ ಲಾಗಿದೆ.