ನವದೆಹಲಿ: ದೇಶದಾದ್ಯಂತ 24 ಗಂಟೆ ಅವಧಿಯಲ್ಲಿ 10,853 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 526 ಮಂದಿ ಸೋಂಕಿ ತರು ಮೃತಪಟ್ಟಿದ್ದು, 12,432 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ.
ದೇಶದಲ್ಲಿ 1,44,845 ಸಕ್ರಿಯ ಪ್ರಕರಣಗಳಿದ್ದು, ಇದು 260 ದಿನಗಳಲ್ಲೇ ಅತಿ ಕಡಿಮೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶ ತಿಳಿಸಿದೆ. ಈವರೆಗೆ ಸೋಂಕಿತರಾದವರ ಸಂಖ್ಯೆ 34,355,536 ತಲುಪಿದೆ. ಸಾವಿನ ಸಂಖ್ಯೆ 4,60,791ಕ್ಕೆ ಏರಿಕೆಯಾಗಿದೆ.