ನವದೆಹಲಿ: ಅಕ್ಟೋಬರ್ 10 ರ ವೇಳೆಗೆ, ದೇಶದಲ್ಲಿ ಜನೌಷಧಿ ಕೇಂದ್ರಗಳ ಸಂಖ್ಯೆ 8,366 ಕ್ಕೆ ತಲುಪಿದೆ. ಈ ಕೇಂದ್ರ ಗಳನ್ನು ದೇಶದ 736 ಜಿಲ್ಲೆಗಳಲ್ಲಿ ತೆರೆಯಲಾಗಿದೆ. 2024 ರ ವೇಳೆಗೆ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಸಂಖ್ಯೆ ಯನ್ನು 10,000 ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಯೋಜಿಸಿದೆ.
ಕೇಂದ್ರದಲ್ಲಿ ಜನರಿಕ್ ಔಷಧಿಗಳನ್ನು ಸರ್ಕಾರ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ. ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಪ್ರಕಾರ, ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರಗಳ ಸಂಖ್ಯೆಯನ್ನು ಮಾರ್ಚ್ 2024 ರ ವೇಳೆಗೆ 10,000 ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಕೇಂದ್ರವು 1451 ಔಷಧಿಗಳು ಮತ್ತು 240 ಶಸ್ತ್ರಚಿಕಿತ್ಸಾ ಉತ್ಪನ್ನಗಳನ್ನು ನೀಡುತ್ತದೆ. ಪ್ರಧಾನಮಂತ್ರಿ ಜನ ಔಷಧಿ ಯೋಜನೆ ಅಡಿಯಲ್ಲಿ ಲಭ್ಯವಿರುವ ಔಷಧಿಗಳು ಸಾಮಾನ್ಯ ಜನರಿಗೆ ಬ್ರಾಂಡೆಡ್ ಔಷಧಿಗಳಿಗಿಂತ ಶೇ .50 ರಿಂದ 90 ರಷ್ಟು ಅಗ್ಗದ ದರದಲ್ಲಿ ಲಭ್ಯವಿದೆ.
ಜನೌಷಧಿ ಕೇಂದ್ರ ತೆರೆಯಲು ಸರ್ಕಾರ ಸುವರ್ಣಾವಕಾಶ ನೀಡುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಗಳಿವೆ. ಈ ಔಷಧಾಲಯವು ಸಾಮಾನ್ಯ ಔಷಧಿಗಳನ್ನು ಮಾರಾಟ ಮಾಡುತ್ತದೆ. ಕೇಂದ್ರವನ್ನು ತೆರೆಯಲು ನೀವು ಆನ್ಲೈನ್ ಅರ್ಜಿಯನ್ನು ಸಲ್ಲಿಸಬೇಕು.
ಭಾರತ ಸರ್ಕಾರವು ಜನೌಷಧಿ ಯೋಜನೆಯಡಿ 2.5 ಲಕ್ಷ ರೂ ಆರ್ಥಿಕ ಸಹಾಯ ನೀಡುತ್ತದೆ. ಅದರಿಂದ ನೀವು ಈ ಔಷಧಾಲಯ ತೆರೆಯಬಹುದು. ಆದರೆ ಸರ್ಕಾರ ಒಟ್ಟಾಗಿ 2.50 ಲಕ್ಷ ನೀಡುವುದಿಲ್ಲ. ಆದರೆ ಹಂತ ಹಂತವಾಗಿ ಫಲಾನುಭವಿಗಳಿಗೆ ನೀಡುತ್ತದೆ.