Sunday, 15th December 2024

ಗೋವಾದಲ್ಲಿ ನ.21 ರಿಂದ 10, 12ನೇ ತರಗತಿ ಆರಂಭ

ಪಣಜಿ : ಗೋವಾದಲ್ಲಿ ನ.21 ರಿಂದ 10 ಮತ್ತು 12ನೇ ತರಗತಿಗಳಿಗೆ ಶಾಲೆ ಆರಂಭವಾಗಲಿದ್ದು, ಗೋವಾ ಸರ್ಕಾರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(ಎಸ್‌ಒಪಿ)ಗಳನ್ನು ಬಿಡುಗಡೆ ಮಾಡಿದ್ದು, ಒಂದು ತರಗತಿಯಲ್ಲಿ ಕೇವಲ 12 ಜನ ಮಾತ್ರ ಹಾಜರಾಗ ಬೇಕಾಗಿ ತಿಳಿಸಿದೆ.

ಎಸ್‌ಒಪಿ ಪ್ರಕಾರ, ಒಂದು ತರಗತಿಯಲ್ಲಿ 12 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರಬಾರದು ಮತ್ತು ತರಗತಿಗಳು ಬೆಸ-ಸಮ ಸೂತ್ರ ವನ್ನು ಅನುಸರಿಸಬೇಕು. ತರಗತಿಯಲ್ಲಿ ವಿದ್ಯಾರ್ಥಿಗಳು ಪರಸ್ಪರ ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಕೌಶಲ್ಯ ಆಧಾರಿತ ತರಬೇತಿಗಾಗಿ ಕಾರ್ಯಾಗಾರಗಳು/ಪ್ರಯೋಗಾಲಯಗಳಲ್ಲಿ ವಿದ್ಯಾರ್ಥಿಗಳು ತರಬೇತಿ ಸಾಧನಗಳನ್ನು ಬಳಸುವ ಮೊದಲು ಮತ್ತು ನಂತರ ತಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಮಾಸ್ಕ್ , ಹ್ಯಾಂಡ್ ಸ್ಯಾನಿಟೈಜರ್‌ಗಳು ಮುಂತಾದ ವೈಯಕ್ತಿಕ ಸಂರಕ್ಷಣಾ ವಸ್ತುಗಳ ಸೂಕ್ತ ಬ್ಯಾಕ್-ಅಪ್ ಸಂಗ್ರಹವಿರುವಂತೆ ನೋಡಿಕೊಳ್ಳಬೇಕು.