Friday, 22nd November 2024

ನವದೆಹಲಿಯಲ್ಲಿ 112.1 ಮೀ. ಮೀ ಮಳೆ

ನವದೆಹಲಿ: ಬುಧವಾರ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ನವದೆಹಲಿಯಲ್ಲಿ 112.1 ಮೀ. ಮೀ ಮಳೆಯಾಗಿದ್ದು, ಸರಾಸರಿ ಮಳೆ ಪ್ರಮಾಣದ ಶೇ 90ರಷ್ಟು ಭಾಗ ಒಂದೇ ದಿನದಲ್ಲಿ ಸುರಿ ದಂತಾಗಿದೆ.

ನವದೆಹಲಿಯ 12 ವರ್ಷಗಳ ಇತಿಹಾಸದಲ್ಲಿ ಸೆಪ್ಟಂಬರ್‌ ತಿಂಗಳಲ್ಲಿ ಮೊದಲ ಬಾರಿಗೆ ಇಷ್ಟು ಗರಿಷ್ಠ ಪ್ರಮಾಣದಲ್ಲಿ ಮಳೆಯಾಗಿದೆ. ಭಾರಿ ಮಳೆಯಿಂದಾಗಿ ನವದೆಹಲಿಯ ತಗ್ಗು ಪ್ರದೇಶಗಳು ಜಲಾ ವೃತಗೊಂಡಿದ್ದು, ಕೆಲವು ಭಾಗಗಳಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸಾಮಾನ್ಯವಾಗಿ, ಪ್ರತಿ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಸರಾಸರಿ 125.1 ಮಿಮೀ ಮಳೆಯಾಗುತ್ತದೆ. ತಿಂಗಳಲ್ಲಿ ಬೀಳಬೇಕಿದ್ದ ಸರಾಸರಿ ಮಳೆ ಪ್ರಮಾಣದ ಶೇ 90ರಷ್ಟು, ತಿಂಗಳ ಮೊದಲ ದಿನದಲ್ಲೇ ಸುರಿದಿದೆ.

ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆಯ ಮಹೇಶ್‌ ಪಲವಾಟ್‌ ಪ್ರಕಾರ, ‘ಹವಾಮಾನ ಬದಲಾವಣೆಯಿಂದಾಗಿ ಮಳೆಯ ಮಾದರಿಯೇ ಬದಲಾಗುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಮಳೆಯಾಗುವ ದಿನಗಳು ಕಡಿಮೆಯಾಗಿದೆ. ಹವಾಮಾನ ವೈಪರೀತ್ಯದ ಘಟನೆಗಳು ಹೆಚ್ಚಾಗಿವೆ’ ಎಂದು ಹೇಳಿದರು.