Sunday, 10th November 2024

ನೋಯ್ಡಾದಲ್ಲಿ ಅಗ್ನಿ ಅವಘಡ: 12 ಅಂಗಡಿಗಳು, 16 ಫ್ಲಾಟ್‌ಗಳು ಆಹುತಿ

ನೋಯ್ಡಾ: ನೋಯ್ಡಾದಲ್ಲಿ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿ, 12 ಅಂಗಡಿಗಳು ಮತ್ತು 16 ಫ್ಲಾಟ್‌ಗಳು ಆಹುತಿ ಯಾಗಿವೆ.

ಗಾರ್ಡೇನಿಯಾ ಗಾಲ್ಫ್ ಸಿಟಿಯ ನೋಯ್ಡಾ ಸೆಕ್ಟರ್ 75ರ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿ ಅವಘಡ ದಲ್ಲಿ 12 ಅಂಗಡಿಗಳು ನಾಶವಾಗಿವೆ. ಬೆಂಕಿಗೆ ಆಹುತಿಯಾದ ಅಂಗಡಿಗಳು ನೆಲ ಮಹಡಿಯಲ್ಲಿದ್ದರೆ ಮೇಲಿನ ಮಹಡಿಯಲ್ಲೂ ಬೆಂಕಿ ಆವರಿಸಿಕೊಂಡಿದೆ. ಘಟನೆಗೆ ನಿಖರ ಕಾರಣ ಏನು ಎಂದು ಇನ್ನೂ ತಿಳಿದು ಬಂದಿಲ್ಲ.

ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಅಂಗಡಿಗಳು ನೆಲ ಮಹಡಿಯಲ್ಲಿ ಮತ್ತು ಫ್ಲಾಟ್‌ಗಳು ಮೇಲಿನ ಮಹಡಿಯಲ್ಲಿ ಬೆಂಕಿ ಏಕಾಏಕಿ ಆವರಿಸಿದೆ. ಅಗ್ನಿಶಾಮಕ ಸಿಬ್ಬಂದಿ ಅರ್ಧ ಗಂಟೆಯಲ್ಲಿ ಬೆಂಕಿ ನಂದಿಸಿದ್ದು, ಯಾರಿಗೂ ಗಾಯ ಗಳಾಗಿಲ್ಲ. 13 ಟವರ್‌ಗಳಲ್ಲಿ 1026 ಫ್ಲಾಟ್‌ಗಳಿದ್ದು, ಅವುಗಳಲ್ಲಿ 650 ಫ್ಲಾಟ್‌ಗಳು ಆಕ್ರಮಿಸಿಕೊಂಡಿವೆ ಎಂದು ಸ್ಥಳೀಯರು ಹೇಳಿದ್ದಾರೆ.

ಸೊಸೈಟಿಯಲ್ಲಿ ನೆಲಮಹಡಿಯಲ್ಲಿ 43 ಅಂಗಡಿಗಳಿವೆ. ಸೆಕ್ಯುರಿಟಿ ಗಾರ್ಡ್ ಬೆಳಿಗ್ಗೆ ಅಂಗಡಿಯಲ್ಲಿ ಬೆಂಕಿಯನ್ನು ಗಮನಿಸಿದರು. ನಂತರ ಸಿಬ್ಬಂದಿ ಇತರ ಅಧಿಕಾರಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.

ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಸೆಕ್ಟರ್ 49 ಪೊಲೀಸ್ ಠಾಣೆಯ ಎಸ್‌ಎಚ್‌ಒ ವಿನೋದ್ ಕುಮಾರ್ ತಿಳಿಸಿದ್ದಾರೆ.