Sunday, 15th December 2024

ಇಳಿಯುತ್ತಿದೆ ಕರೋನಾ ಸೋಂಕು: 1,27,510 ಹೊಸ ಪ್ರಕರಣ ಪತ್ತೆ

#corona

ನವದೆಹಲಿ: ದೇಶದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ಮಂಗಳವಾರ ಇಳಿಕೆ ಕಂಡು ಬಂದಿದೆ.

24 ಗಂಟೆ ಅವಧಿಯಲ್ಲಿ 1,27,510 ಹೊಸ ಪ್ರಕರಣಗಳು ದೃಢಪಟ್ಟಿದ್ದು, 2,795 ಸಾವು ಸಂಭವಿಸಿದೆ. 2,55,287 ಮಂದಿ ಚೇತರಿಸಿ ಕೊಂಡಿದ್ದು, ಸದ್ಯ 18,95,520 ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದಾಗಿ ಒಟ್ಟು 3,31,895 ಜನ ಮೃತಪಟ್ಟಿದ್ದು, ಸಾವಿನ ಪ್ರಮಾಣ ಶೇ 1.18ರಷ್ಟಿದೆ.

ಸೋಮವಾರ ಒಂದೇ ದಿನ 19,25,374 ಮಾದರಿಗಳ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.