Thursday, 19th September 2024

ರಾಜ್ಯಸಭೆಯ 13 ಸ್ಥಾನಗಳಿಗೆ ಮಾ.31ರಂದು ಚುನಾವಣೆ

ನವದೆಹಲಿ: ಚುನಾವಣಾ ಆಯೋಗವು ರಾಜ್ಯಸಭೆಯ 13 ಸ್ಥಾನಗಳಿಗೆ ಮಾ.31 ರಂದು ಚುನಾವಣೆ ನಿಗದಿ ಪಡಿಸಿರುವುದಾಗಿ ಸೋಮವಾರ ಪ್ರಕಟಿಸಿದೆ.

ಆನಂದ್‌ ಶರ್ಮಾ, ಎ.ಕೆ.ಆಂಟೊನಿ, ಪ್ರತಾಪ್‌ ಸಿಂಗ್‌ ಬಾಜ್ವಾ, ನರೇಶ್‌ ಗುಜರಾಲ್‌ ಸೇರಿದಂತೆ ಹಲವು ಮುಖಂಡರು ರಾಜ್ಯ ಸಭೆಯ ಸದಸ್ಯ ಸ್ಥಾನ ದಿಂದ ನಿವೃತ್ತರಾಗಲಿದ್ದಾರೆ.

ರಾಜ್ಯಸಭೆಯ ಸ್ಥಾನಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು 776 ಸಂಸದರು, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 4,120 ಶಾಸಕರು ರಾಷ್ಟ್ರಪತಿ ಆಯ್ಕೆಗೆ ಮತದಾನ ಮಾಡುತ್ತಾರೆ.

ಒಟ್ಟು ಆರು ರಾಜ್ಯಗಳಿಂದ ರಾಜ್ಯಸಭೆಯ 13 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪಂಜಾಬ್‌ನಲ್ಲಿ ಐದು ಸ್ಥಾನಗಳು, ಕೇರಳ ದಲ್ಲಿ ಮೂರು, ಅಸ್ಸಾಂನಲ್ಲಿ ಎರಡು, ಹಿಮಾಚಲ ಪ್ರದೇಶ, ತ್ರಿಪುರಾ ಹಾಗೂ ನಾಗಾಲ್ಯಾಂಡ್‌ನಿಂದ ತಲಾ ಒಂದು ಸ್ಥಾನ ಖಾಲಿ ಉಳಿದಿವೆ.