Wednesday, 27th November 2024

13,405 ಕೋವಿಡ್‌ ಪ್ರಕರಣ ದೃಢ

covid

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 13,405 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ, 235 ಮಂದಿ ಸೋಂಕಿತರು ಮೃತಪಟ್ಟಿ ದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಒಟ್ಟು ಸೋಂಕಿತರ ಸಂಖ್ಯೆ 4,28,51,929 ಕ್ಕೆ ಏರಿಕೆಯಾಗಿದೆ.

ಆ ಪೈಕಿ 5,12,344 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 4,21,58,510 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ 1,81,075 ಸಕ್ರಿಯ ಪ್ರಕರಣಗಳಿವೆ.

ದೇಶದಲ್ಲಿ ಇದುವರೆಗೆ 1,75,83,27,441 ಕೋಟಿ ಡೋಸ್‌ ಕೋವಿಡ್ ಲಸಿಕೆ ಹಾಕಲಾಗಿದೆ.

ಕೇರಳದಲ್ಲಿ 59,729, ಮಹಾರಾಷ್ಟ್ರದಲ್ಲಿ 18,516, ತಮಿಳುನಾಡಿನಲ್ಲಿ 14,033, ಕರ್ನಾಟಕದಲ್ಲಿ 11,397, ಉತ್ತರ ಪ್ರದೇಶ 6,366, ಆಂಧ್ರ ಪ್ರದೇಶದಲ್ಲಿ 5,985 ಸಕ್ರಿಯ ಪ್ರಕರಣಗಳಿವೆ.