ಖಾಸಗಿ ಸೆಕ್ಯುರಿಟಿ ಗಾರ್ಡ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾ ಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪೊಲೀಸರು ಭವ್ಯಾ ರಾಯ್ ಎಂಬಾಕೆ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿರುವುದಾಗಿ ವರದಿ ವಿವರಿಸಿದೆ.
ಸೆಕ್ಯುರಿಟಿ ಅನೂಪ್ ಕುಮಾರ್, ನಿಯಮದಂತೆ ಕಾರಿನ ಸಂಖ್ಯೆ ನಮೂದಿಸಿಕೊಂಡು ನಂತರ ಗೇಟ್ ತೆರೆದಿದ್ದ. ಇದರಿಂದ ಆಕ್ರೋಶ ಗೊಂಡ ಭವ್ಯಾ, ಕುಮಾರ್ ಗೆ ಬೈಗುಳಗಳ ಸುರಿಮಳೆಗೈದಿದ್ದಳು.
ನೋಯ್ಡಾದ ಗ್ರ್ಯಾಂಡ್ ಒಮ್ಯಾಕ್ಸ್ ಸೊಸೈಟಿಯಲ್ಲಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದಿದ್ದ ಸ್ಥಳೀಯ ರಾಜಕೀಯ ಮುಖಂಡ ಶ್ರೀಕಾಂತ್ ತ್ಯಾಗಿ ಜೈಲು ಪಾಲಾದ ಘಟನೆ ನಂತರ ಈ ವಿಡಿಯೋ ವಿಚಾರ ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ.