Wednesday, 11th December 2024

ಕೇರಳದಲ್ಲಿ ಕೊರೋನಾ ನಿಯಂತ್ರಣಕ್ಕೆ ಸೆಕ್ಷನ್ 144 ಜಾರಿ

ತಿರುವನಂತಪುರ : ಕೊರೋನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ತತ್‌’ಕ್ಷಣದಿಂದಲೇ ಜಾರಿಗೊಳಿಸಿದೆ.

ರಾಜ್ಯದಲ್ಲಿ ಕರೋನ ವೈರಸ್ ಪ್ರಕರಣಗಳ ಉಲ್ಬಣ ನಿಯಂತ್ರಿಸಲು ಐದಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸುವುದನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಮುಖ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ ಅವರು ಹೊರಡಿಸಿದ ಆದೇಶದಲ್ಲಿ, ಸಭೆಗಳು ಸೋಂಕಿ ನ ಹರಡುವಿಕೆಯ ಅಪಾಯ ವನ್ನುಂಟುಮಾಡುತ್ತವೆ ಮತ್ತು ಈ ಆದೇಶವು ಅಕ್ಟೋಬರ್ 3 ರಂದು ಬೆಳಿಗ್ಗೆ 9 ಗಂಟೆಯಿಂದ ಜಾರಿಗೆ ಬರಲಿದೆ ಮತ್ತು ಅಕ್ಟೋಬರ್ 31 ರವರೆಗೆ ಜಾರಿಯಲ್ಲಿರು ತ್ತದೆ ಎಂದು ತಿಳಿಸಿದ್ದಾರೆ.