Friday, 13th December 2024

15 ಸಾವಿರ ಗಡಿ ದಾಟದ ನಿಫ್ಟಿ, ಷೇರುಪೇಟೆ ಕುಸಿತ

ನವದೆಹಲಿ/ಮುಂಬೈ: ಭಾರತೀಯ ಷೇರುಪೇಟೆಯ ಕುಸಿತ ಮುಂದುವರಿದಿದೆ. ಗುರುವಾರ ಷೇರುಪೇಟೆ ಸೆನ್ಸೆಕ್ಸ್‌ 337 ಪಾಯಿಂಟ್ಸ್, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 15 ಸಾವಿರ ಗಡಿಯಿಂದ ಕೆಳಗಿಳಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 337.78 ಪಾಯಿಂಟ್ಸ್‌ ಇಳಿಕೆಗೊಂಡು 49,564.86 ಪಾಯಿಂಟ್ಸ್, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 124.20 ಪಾಯಿಂಟ್ಸ್ ಇಳಿಕೆಗೊಂಡು 14906 ಪಾಯಿಂಟ್ಸ್‌ ಮುಟ್ಟಿದೆ. ದಿನದ ವಹಿವಾಟು ಅಂತ್ಯಕ್ಕೆ 1614 ಷೇರುಗಳು ಏರಿಕೆ ಗೊಂಡರೆ, 1397 ಷೇರುಗಳು ಕುಸಿದಿವೆ ಮತ್ತು 161 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಟಾಟಾ ಸ್ಟೀಲ್, ಹಿಂಡಾಲ್ಕೊ ಇಂಡಸ್ಟ್ರೀಸ್, ಕೋಲ್ ಇಂಡಿಯಾ, ಬ್ರಿಟಾನಿಯಾ ಇಂಡಸ್ಟ್ರೀಸ್ ಮತ್ತು ಒಎನ್‌ಜಿಸಿ ನಿಫ್ಟಿಯಲ್ಲಿ ಲಾಭಗಳಿಸಿದ ಷೇರುಗಳಾಗಿದ್ದು, ಎಂ ಅಂಡ್ ಎಂ, ಸಿಪ್ಲಾ, ಬಿಪಿಸಿಎಲ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಟೈಟಾನ್ ಕಂಪನಿ ನಷ್ಟಗೊಂಡಿವೆ.