Sunday, 15th December 2024

150 ಮಾವೋವಾದಿ ಸದಸ್ಯರು ಶರಣು

ಭುವನೇಶ್ವರ್‌: ಕಟಾಫ್ ಪ್ರದೇಶದಲ್ಲಿ ಸುಮಾರು 150 ಮಾವೋವಾದಿ ಸದಸ್ಯರು ಪೊಲೀಸರಿಗೆ ಶರಣಾಗಿದ್ದಾರೆ.

ಚಿತ್ರಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯ ರಾಳ್ಳಗೆದ್ದ ಪಂಚಾಯಿತಿ ವ್ಯಾಪ್ತಿಯ ಮಲ್ಕಾನ್‌ಗಿರಿ ಎಸ್‌ಪಿ ನಿತೀಶ್ ವಾಧ್ವಾನಿ ಮತ್ತು ಬಿಎಸ್‌ಎಫ್ ಡಿಐಜಿ ಎಸ್‌ಕೆ ಸಿನ್ ಮುಂದೆ ಶರಣಾದರು.

ಜಾನ್‌ಬಾಯಿಯ ಬಿಎಸ್‌ಎಫ್ ಕ್ಯಾಂಪ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶರಣಾದ ಸೇನಾ ಸದಸ್ಯರನ್ನು ಪೊಲೀಸರು ಮೀಡಿಯಾಗೆ ತೋರಿಸಿದರು. ಕಟಾಫ್ ಪ್ರದೇಶದಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ನೋಡಿ ಜೀವನದ ಮುಖ್ಯ ವಾಹಿನಿಗೆ ಸೇರಲು ಬಯಸಿ ದ್ದಾರೆ ಎಂದು ಹೇಳಿದರು.

ಶರಣಾದವರು ಮಾವೋವಾದಿಗಳ ಬಟ್ಟೆಗಳನ್ನು ಸುಟ್ಟುಹಾಕಿದರು ಮತ್ತು ಮಾವೋವಾದಿಗಳ ಸ್ಮಾರಕಗಳನ್ನು ಧ್ವಂಸಗೊಳಿಸಿ, ಮಾವೋವಾದಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಮಲ್ಕಾನ್‌ಗಿರಿ ಜಿಲ್ಲಾ ಎಸ್‌ಪಿ ನಿತೀಶ್ ವಾಡ್ವಾನಿ ಶರಣಾದ ಮಾವೋವಾದಿ ಸದಸ್ಯರಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದರು.