Sunday, 24th November 2024

ಕೋವಿಡ್: 16 ಸಾವಿರದ 159 ಪ್ರಕರಣ ದಾಖಲು

#corona

 

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗಿದ್ದು, ಹೊಸ 16 ಸಾವಿರದ 159 ಪ್ರಕರಣಗಳು ದಾಖಲಾಗಿದೆ. 28 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾ ಲಯದ ಪ್ರಕಟಣೆ ತಿಳಿಸಿದೆ.

ದೇಶದಲ್ಲಿ ಇದುವರೆಗೆ ಕೋವಿಡ್ -19 ವೈರಸ್ ಕಾಣಿಸಿಕೊಂಡ ನಂತರ 4 ಕೋಟಿ ಯ 29 ಲಕ್ಷದ 07 ಸಾವಿರದ 327 ಮಂದಿ ಗುಣಮುಖರಾಗಿದ್ದು ಇಲ್ಲಿಯವರೆಗೆ 5 ಲಕ್ಷದ 25 ಸಾವಿರದ 270 ಮಂದಿ ಮೃತಪಟ್ಟಿದ್ದಾರೆ.

ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ 198.20ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದೆ.