Saturday, 14th December 2024

ಷೇರುಪೇಟೆ ಸೆನ್ಸೆಕ್ಸ್ 166 ಪಾಯಿಂಟ್ಸ್‌ ಏರಿಕೆ

ಮುಂಬೈ/ನವದೆಹಲಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 166 ಪಾಯಿಂಟ್ಸ್‌ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 42 ಪಾಯಿಂಟ್ಸ್‌ ಹೆಚ್ಚಳಗೊಂಡಿದ್ದು  ಲಾಭದೊಂದಿಗೆ ವಾರದ ವಹಿವಾಟು ಅಂತ್ಯಗೊಳಿಸಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 166.07 ಪಾಯಿಂಟ್ಸ್‌ ಹೆಚ್ಚಾಗಿ 52484.67 ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 42.20 ಪಾಯಿಂಟ್ಸ್‌ ಏರಿಕೆಗೊಂಡು 15722.20 ಪಾಯಿಂಟ್ಸ್ ಮುಟ್ಟಿದೆ. ದಿನದ ವಹಿವಾಟು ಅಂತ್ಯಕ್ಕೆ 1874 ಷೇರುಗಳು ಏರಿಕೆಗೊಂಡರೆ, 1279 ಷೇರುಗಳು ಕುಸಿದು 120 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಟಾಟಾ ಸ್ಟೀಲ್, ಬ್ರಿಟಾನಿಯಾ ಇಂಡಸ್ಟ್ರೀಸ್, ಜೆಎಸ್‌ಡಬ್ಲ್ಯೂ ಸ್ಟೀಲ್, ಪವರ್ ಗ್ರಿಡ್ ಕಾರ್ಪ್ ಮತ್ತು ಹಿಂಡಾಲ್ಕೊ ಮೊದಲ ಸ್ಥಾನದಲ್ಲಿವೆ. ಲೋಹ ಮತ್ತು ವಿದ್ಯುತ್ ಸೂಚ್ಯಂಕಗಳು ತಲಾ 1 ಪ್ರತಿಶತದಷ್ಟು ಕುಸಿದಿದ್ದು, ಇನ್ಫ್ರಾ, ಫಾರ್ಮಾ ಮತ್ತು ಬ್ಯಾಂಕಿಂಗ್ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ.