ನವದೆಹಲಿ: ದೇಶದಲ್ಲಿ ಶನಿವಾರ ಕರೋನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 17,092 ಮಂದಿಗೆ ಹೊಸದಾಗಿ ಕರೋನಾ ಸೋಂಕು ದೃಢಪಟ್ಟಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 17,092 ಮಂದಿಗೆ ಹೊಸದಾಗಿ ಕರೋನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ ಸೋಂಕಿನಿಂದ 29 ಮಂದಿ ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕರೋನಾ ಮಹಾ ಮಾರಿಗೆ ಬಲಿಯಾದವರ ಸಂಖ್ಯೆ 525168 ಕ್ಕೆ ಏರಿಕೆಯಾಗಿದೆ.