Saturday, 14th December 2024

ಷೇರುಪೇಟೆಯಲ್ಲಿ ಸಕಾರಾತ್ಮಕತೆ: ಸೆನ್ಸೆಕ್ಸ್ 173 ಅಂಕಗಳ ಏರಿಕೆ

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಮಂಗಳವಾರ ಸಕಾರಾತ್ಮಕ ಆರಂಭ ಪಡೆದಿದೆ. ಮುಂಬೈ ಷೇರು ಪೇಟೆ ಸೆನ್ಸೆಕ್ಸ್ 173 ಪಾಯಿಂಟ್ಸ್ ಏರಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 53.80 ಪಾಯಿಂಟ್ಸ್ ಹೆಚ್ಚಳ ಗೊಂಡಿತು.

ಸೆನ್ಸೆಕ್ಸ್ 166.52 ಪಾಯಿಂಟ್ಸ್‌ ಏರಿಕೆಗೊಂಡು 48,553.03 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 67.25 ಪಾಯಿಂಟ್ಸ್‌ ಹೆಚ್ಚಾಗಿ 14,552.25 ಪಾಯಿಂಟ್ಸ್‌ ತಲುಪಿದೆ. ಆರಂಭಿಕ ವಹಿವಾಟಿನಲ್ಲಿ 1017 ಷೇರುಗಳು ಏರಿಕೆ ಗೊಂಡರೆ, 225 ಷೇರುಗಳು ಕುಸಿದವು ಮತ್ತು ಅದೇ ಸಮಯದಲ್ಲಿ, 62 ಕಂಪನಿಗಳ ಷೇರು ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಜೆಎಸ್‌ಡಬ್ಲ್ಯೂ ಸ್ಟೀಲ್ ಷೇರುಗಳು ಸುಮಾರು 8 ರೂ.ಗಳಷ್ಟು ಏರಿಕೆ ಕಂಡು 663.65 ರೂ.ಗೆ ತಲುಪಿದೆ. ಟಾಟಾ ಸ್ಟೀಲ್ ಷೇರುಗಳು ಸುಮಾರು 8 ರೂ.ಗಳ ಏರಿಕೆ ಕಂಡು 949.20 ರೂ. ಆಗಿದೆ.