Monday, 25th November 2024

ದೇಶದಲ್ಲಿ 184,372 ಕೋವಿಡ್‌ ಹೊಸ ಪ್ರಕರಣಗಳ ಪತ್ತೆ, ಮಹಾರಾಷ್ಟ್ರದಲ್ಲಿ ನಿಷೇಧಾಜ್ಞೆ

ನವದೆಹಲಿ : ಭಾರತದಲ್ಲಿ ಬುಧವಾರ ಒಂದೇ ದಿನ 184,372 ಕೋವಿಡ್‌ ಹೊಸ ಪ್ರಕರಣಗಳು ದಾಖಲಾಗಿವೆ. ಐದು ತಿಂಗಳಲ್ಲಿ ಮೊದಲ ಬಾರಿಗೆ ಸಾವು ನೋವುಗಳು 1000 ರ ಗಡಿಯನ್ನು ದಾಟಿವೆ.

‘ಟಿಕಾ ಉತ್ಸವ’ದ (ಲಸಿಕೆ ಉತ್ಸವ) ಕೊನೆಯ ದಿನ ಈ ಅಂಕಿಅಂಶಗಳು ಬಂದಿವೆ.  ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ವೈರಲ್ ರೋಗದ ಹರಡುವಿಕೆ ತಡೆಯಲು ಹೊಸ ನಿರ್ಬಂಧಗಳನ್ನು ಘೋಷಿಸಿದೆ.

ಬುಧವಾರ, ಮಹಾರಾಷ್ಟ್ರದಲ್ಲಿ ಐದಕ್ಕಿಂತ ಹೆಚ್ಚು ಜನರ ಸಭೆಯನ್ನು ತಡೆಯುವ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಮಂಗಳವಾರ ಒಂದೇ ದಿನ 60000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ.