Wednesday, 30th October 2024

ಷೇರು ಖರೀದಿ ಜೋರು: ಸಂವೇದಿ ಸೂಚ್ಯಂಕ 200 ಅಂಕ ಏರಿಕೆ

ಮುಂಬೈ: ಹೂಡಿಕೆದಾರರು ಷೇರುಗಳ ಖರೀದಿಗೆ ಮುಂದಾದ ಪರಿಣಾಮ ಬುಧವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 200 ಅಂಕ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದೆ.

ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 207 ಅಂಕಗಳ ಏರಿಕೆಯೊಂದಿಗೆ 49,958.41 ಅಂಕಗಳ ವಹಿವಾಟಿನ ಜತೆ ಮತ್ತೆ 50 ಸಾವಿರದ ಗಡಿಯತ್ತ ಮುನ್ನುಗ್ಗಿದೆ. ಎನ್ ಎಸ್ ಇ ನಿಫ್ಟಿ 69.35 ಅಂಕಗಳ ಏರಿಕೆಯೊಂದಿಗೆ 14,777.15 ಅಂಕಗಳೊಂದಿಗೆ ವಹಿವಾಟು ನಡೆಸಿದೆ.

ಟಿಸಿಎಸ್, ಪವರ್ ಗ್ರಿಡ್, ಇನ್ಫೋಸಿಸ್, ಎಚ್ ಯುಎಲ್ ಮತ್ತು ಟೆಕ್ ಮಹೀಂದ್ರ ಷೇರುಗಳು ನಷ್ಟ ಅನುಭವಿಸಿವೆ.