ಬುಧವಾರ ಪ್ರತಿಭಟನೆಗಳು ಭುಗಿಲೆದ್ದ ನಂತರ ಸುಮಾರು 35 ರೈಲುಗಳನ್ನು ರದ್ದುಗೊಳಿಸಲಾಗಿದ್ದು, 13 ಅಲ್ಪಾವಧಿಯ ರೈಲುಗಳನ್ನು ನಿಲ್ಲಿಸ ಲಾಗಿದೆ. ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಇದರಿಂದಾಗಿ ಎಂಟು ರೈಲುಗಳ ಕಾರ್ಯಾ ಚರಣೆಯನ್ನು ಮೇಲ್ವಿಚಾರಣೆ ಮಾಡಲು ಪೂರ್ವ ಮಧ್ಯ ರೈಲ್ವೆ ನಿರ್ಧರಿಸಿದೆ. ಈ ರೈಲುಗಳ ಚಲನವಲನದ ಮೇಲೆ ನಿಗಾ ಇಡಲಾಗಿದೆ.
ಪ್ರತಿಭಟನೆಗಳು ಭಗಿಲೆದ್ದ ಬೆನ್ನಲ್ಲೆ ಅಗ್ನಿಪಥ್ ಯೋಜನೆಯಡಿ ನೇಮಕಾತಿಗೆ ಇರುವ ವಯೋಮಿತಿಯನ್ನು ಕೇಂದ್ರವು 23 ಕ್ಕೆ ಹೆಚ್ಚಿಸಿದೆ.
ಇಸಿಆರ್‌ನಲ್ಲಿ ಚಲಿಸುತ್ತಿರುವ ಮೂರು ರೈಲುಗಳ ಕೋಚ್‌ಗಳು ಮತ್ತು ಕುಲ್ಹಾರಿಯಾದಲ್ಲಿ ಒಂದು ಖಾಲಿ ರೇಕ್‌ಗಳು ಹಿಂಸಾತ್ಮಕ ಪ್ರತಿಭಟನಾ ಕಾರರಿಂದ ಹಾನಿಗೊಳಗಾಗಿವೆ. ಉತ್ತರ ಪ್ರದೇಶದ ಬಾಲಿಯಾದಲ್ಲಿ ವಾಷಿಂಗ್ ಲೈನ್‌ನಲ್ಲಿ ನಿಂತ ರೈಲಿನ ಒಂದು ಬೋಗಿಗೆ ಹಾನಿಯಾಗಿದೆ.
ಬಲಿಯಾದಲ್ಲಿ, ‘ಭಾರತ್ ಮಾತಾ ಕಿ ಜೈ’ ಮತ್ತು ಅಗ್ನಿಪತ್ ಯೋಜನೆ ಹಿಂಪಡೆಯಿರಿ ಘೋಷಣೆಗಳನ್ನು ಎತ್ತುವ ಪ್ರತಿಭಟನಾ ಕಾರರು ಖಾಲಿ ರೈಲಿಗೆ ಬೆಂಕಿ ಹಚ್ಚಿದ್ದು, ಇತರ ಕೆಲವು ರೈಲುಗಳನ್ನು ಧ್ವಂಸಗೊಳಿಸಿದ್ದಾರೆ ಎನ್ನಲಾಗುತ್ತಿದೆ.