Sunday, 15th December 2024

ನಕ್ಸಲರೊಂದಿಗೆ ಕಾಳಗದ ನಂತರ 21 ಸೈನಿಕರು ನಾಪತ್ತೆ

ಸುಕ್ಮಾ: ಛತ್ತೀಸ್ಗಡದ ಸುಕ್ಮಾ -ಬಿಜಾಪುರ ಗಡಿಪ್ರದೇಶದಲ್ಲಿ ನಕ್ಸಲರೊಂದಿಗೆ ನಡೆದ ಕಾಳಗದ ನಂತರ 21 ಸೈನಿಕರು ನಾಪತ್ತೆ ಯಾಗಿದ್ದಾರೆ.

ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ತಾರೆಮ್ ಪ್ರದೇಶದಲ್ಲಿ ಮುಖಾ ಮುಖಿಯಾಗಿ ಈ ಸಂದರ್ಭದಲ್ಲಿ ಎನ್ಕೌಂಟರಿನಲ್ಲಿ ಐವರು ನಕ್ಸಲರನ್ನು ಸದೆಬಡಿಯಲಾಗಿದೆ. ಕಾರ್ಯಾಚರಣೆ ವೇಳೆ 5 ಮಂದಿ ಸೈನಿಕರು ಮೃತಪಟ್ಟಿ ದ್ದು, 20 ಮಂದಿ ಗಾಯ ಗೊಂಡಿದ್ದಾರೆ.

ಗಾಯಗೊಂಡ ಸೈನಿಕರನ್ನು ಬಿಜಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಪುರ ಆಸ್ಪತ್ರೆಗೆ 7 ಜನರನ್ನು ಕಳುಹಿಸಲಾಗಿದೆ.

ಸಿಆರ್ಪಿಎಫ್ ಮಹಾನಿರ್ದೇಶಕ ಕುಲದೀಪ್ ಸಿಂಗ್ ಛತ್ತಿಸ್ಗಢಕ್ಕೆ ತಲುಪಿದ್ದು, ಘಟನೆಯ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಛತ್ತೀಸ್ ಗಢದಲ್ಲಿ ಭದ್ರತಾ ಸಿಬ್ಬಂದಿ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily