Wednesday, 11th December 2024

ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ: 22 ರೋಗಿಗಳ ಸಾವು

ಮುಂಬೈ: ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿ 22 ರೋಗಿಗಳು ಮೃತ ಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಎಫ್‌ಐಆರ್‌ ದಾಖಲಿಸಿದ್ದಾರೆ.

ನಾಸಿಕ್ ನಗರದ ಭದ್ರಕಾಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸ ಲಾಗಿದೆ. ಬುಧವಾರ ಮಧ್ಯಾಹ್ನ ಆಮ್ಲಜನಕ ಪೂರೈಕೆಯಲ್ಲಿ ದಿಢೀರನೆ ವ್ಯತ್ಯಯ ಉಂಟಾಗಿ ಡಾ.ಝಾಕೀರ್ ಹುಸೇನ್ ಆಸ್ಪತ್ರೆಯಲ್ಲಿ 22 ಕರೋನಾ ರೋಗಿಗಳು  ಮೃತಪಟ್ಟಿ ದ್ದರು.

ವೈದ್ಯಕೀಯ ಆಮ್ಲಜನಕ ಸಂಗ್ರಹಿಸುವ ಘಟಕದಲ್ಲಿ ಸೋರಿಕೆಯಾದ ಕಾರಣ, ರೋಗಿಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿ ಈ ಸಾವುಗಳು ಸಂಭವಿಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದರು. 150 ಹಾಸಿಗೆಗಳ ಸಾಮರ್ಥ್ಯವಿರುವ ಈ ಆಸ್ಪತ್ರೆ ಯಲ್ಲಿ 157 ರೋಗಿಗಳು ದಾಖಲಾಗಿದ್ದರು.