Sunday, 15th December 2024

ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 227 ಅಂಕ ಇಳಿಕೆ

ಮುಂಬೈ: ಕಚ್ಛಾ ತೈಲ ಬೆಲೆ ಏರಿಕೆ ಮತ್ತು ವಿದೇಶಿ ನಿಧಿಯ ನಿರಂತರ ಮಾರಾಟದ ಪರಿಣಾಮ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 227 ಅಂಕ ಇಳಿಕೆಯೊಂದಿಗೆ ವಹಿವಾಟು ಮುಂದುವರಿದಿದೆ.

ಸಂವೇದಿ ಸೂಚ್ಯಂಕ 226.07 ಅಂಕ ಇಳಿಕೆಯೊಂದಿಗೆ 55,542.53 ಅಂಕಗಳಲ್ಲಿ ವಹಿ ವಾಟು ಮುಂದುವರಿದಿದೆ. ಎನ್ ಎಸ್ ಇ ನಿಫ್ಟಿ 67.05 ಅಂಕಗಳಷ್ಟು ಕುಸಿತ ಗೊಂಡಿದ್ದು, 16,517 ಅಂಕಗಳ ಗಡಿ ತಲುಪಿದೆ.

ಸೆನ್ಸೆಕ್ಸ್ ಕುಸಿತದಿಂದ ಟೆಕ್ ಮಹೀಂದ್ರ, ಏಷ್ಯನ್ ಪೇಂಟ್ಸ್, ವಿಪ್ರೋ, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಬಜಾಜ್ ಫಿನ್ ಸರ್ವ್, ಇನ್ಫೋಸಿಸ್, ಟಾಟಾ ಸ್ಟೀಲ್ ಮತ್ತು ಟೈಟಾನ್ ಷೇರುಗಳು ನಷ್ಟ ಕಂಡಿದೆ.

ಮಹೀಂದ್ರ ಆಯಂಡ್ ಮಹೀಂದ್ರ, ಆಯಕ್ಸಿಸ್ ಬ್ಯಾಂಕ್ ಷೇರುಗಳು ಲಾಭಗಳಿಸಿದೆ. ಇನ್ನುಳಿದಂತೆ, ಟೋಕಿಯೋ, ಶಾಂಘೈ ಮತ್ತು ಹಾಂಗ್ ಕಾಂಗ್ ಷೇರುಪೇಟೆ ಸೆನ್ಸೆಕ್ಸ್ ಏರಿಕೆಯೊಂದಿಗೆ ವಹಿವಾಟು ನಡೆದಿದೆ.