Tuesday, 10th December 2024

ಸೆನ್ಸೆಕ್ಸ್‌ 228 ಪಾಯಿಂಟ್ಸ್‌ ಏರಿಕೆ

ಮುಂಬೈ/ನವದೆಹಲಿ: ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 228 ಪಾಯಿಂಟ್ಸ್‌ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 69.30 ಪಾಯಿಂಟ್ಸ್‌ ಮುಟ್ಟಿದೆ. ಈ ಮೂಲಕ ಭಾರತೀಯ ಷೇರುಪೇಟೆ ಸೋಮವಾರ ಜಾಗತಿಕ ಸಕಾರಾತ್ಮಕ ಸೂಚನೆಗಳ ಹಿನ್ನೆಲೆಯಲ್ಲಿ ಉತ್ತಮ ಆರಂಭ ಪಡೆದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 228.23 ಪಾಯಿಂಟ್ಸ್‌ ಏರಿಕೆಗೊಂಡು 52712.90 ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ 69.30 ಪಾಯಿಂಟ್ಸ್‌ ಹೆಚ್ಚಾಗಿ 15791.50 ಮುಟ್ಟಿದೆ.

ಈಚರ್ ಮೋಟಾರ್ಸ್‌ನ ಷೇರುಗಳು 28 ರೂ.ಗಳ ಏರಿಕೆ ಕಂಡು, 2,689.00 ರೂ., ಆಕ್ಸಿಸ್ ಬ್ಯಾಂಕಿನ ಷೇರುಗಳು 6 ರೂ.ಗಳ ಲಾಭದೊಂದಿಗೆ 756.30 ರೂ., ಎಚ್‌ಸಿಎಲ್ ಟೆಕ್ ಷೇರುಗಳು 7 ರೂಗಳ ಲಾಭದೊಂದಿಗೆ 992.10 ರೂ.ಗಳಲ್ಲಿ ಪ್ರಾರಂಭವಾಯಿತು. ಒಎನ್‌ಜಿಸಿಯ ಷೇರು ಸುಮಾರು 1 ರೂ.ಗಳ ಲಾಭದೊಂದಿಗೆ 119.20 ರೂ. ತಲುಪಿದೆ.

ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರುಗಳು 3 ರೂ.ಗಳಷ್ಟು ಇಳಿಕೆಯಾಗಿ 668.10 ರೂ., ಡಾ. ರೆಡ್ಡಿಸ್ ಲ್ಯಾಬ್‌ನ ಷೇರುಗಳು 5,570.70 ರೂ.ಗೆ ಪ್ರಾರಂಭವಾದವು. ಇನ್ಫೋಸಿಸ್ ಷೇರುಗಳು ಸುಮಾರು 1 ರೂ.ಗಳಷ್ಟು ಇಳಿಕೆಯಾಗಿ 1,567.20 ರೂ. ಎಚ್‌ಡಿಎಫ್‌ಸಿಯ ಷೇರುಗಳು 3 ಕೋಟಿ ರೂ.ಗಳಷ್ಟು ಇಳಿಕೆಯಾಗಿ 2,472.30 ರೂ. ಮುಟ್ಟಿದೆ.