Wednesday, 11th December 2024

241 ಅಂಕಗಳ ಏರಿಕೆ ಕಂಡ ಸೂಚ್ಯಂಕ

share market

ಮುಂಬೈ: ಷೇರು ಮಾರುಕಟ್ಟೆಯಲ್ಲಿ ಧನಾತ್ಮಕ ವಹಿವಾಟಿನ ಪರಿಣಾಮ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ ಶುಕ್ರವಾರ 241 ಅಂಕಗಳ ಏರಿಕೆ ಕಂಡಿದೆ.

ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕ 241,05 ಅಂಕಗಳ ಏರಿಕೆಯೊಂದಿಗೆ 52,541.52 ಅಂಕಗಳ ವಹಿವಾಟು ನಡೆಸಿದೆ. ಎನ್ಎಸ್ಇ ನಿಫ್ಟಿ 72 ಅಂಕ ಏರಿಕೆಯಾಗಿದ್ದು, 15,809.75ರ ಗಡಿ ದಾಟಿದೆ.

ಸೆನ್ಸೆಕ್ಸ್ ಏರಿಕೆಯಿಂದ ಪವರ್ ಗ್ರಿಡ್, ರಿಲಯನ್ಸ್ ಇಂಡಸ್ಟ್ರೀಸ್, ಒಎನ್ ಜಿಸಿ, ಎಚ್ ಸಿಎಲ್ ಟೆಕ್, ಸನ್ ಫಾರ್ಮಾ, ಇನ್ಫೋಸಿಸ್ ಮತ್ತು ಎಚ್ ಡಿಎಫ್ ಸಿ, ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಲಾಭ ಗಳಿಸಿದೆ. ಗುರುವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 358.83 ಅಂಕ, ನಿಫ್ಟಿ 102.40 ಅಂಕ ಏರಿಕೆಯಾಗಿದ್ದು, 15,737.75ರ ಗಡಿ ತಲುಪಿತ್ತು.