ನವದೆಹಲಿ: ಕರೋನಾ ಬಿಕ್ಕಟ್ಟಿನಿಂದ ಹೊರಬಂದು, ಆನ್‌ಲೈನ್ ಶಿಕ್ಷಣ ಸಂಸ್ಥೆ ಮಾತ್ರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಬೈಜೂಸ್ ತೀರ್ಮಾ ನಿಸಿದೆ. ಮುಂದಿನ ಆರು ತಿಂಗಳಲ್ಲಿ ಸಂಸ್ಥೆಯ ೨,೫೦೦ ನೌಕರರನ್ನು ವಜಾ ಗೊಳಿಸಲು ಕಂಪನಿ ನಿರ್ಧರಿಸಿದೆ.
‘2023ರ ಮಾರ್ಚ್ ವೇಳೆಗೆ ಕಂಪನಿಯನ್ನು ಲಾಭದತ್ತ ಕೊಂಡೊಯ್ಯುವುದು ಉದ್ದೇಶವಾಗಿದೆ. ಹೊಸ ಸಹಭಾಗಿತ್ವ ಗಳೊಂದಿಗೆ ಕಂಪನಿಯ ಬ್ರ್ಯಾಂಡ್ ಹೆಚ್ಚಳಕ್ಕೂ ಯೋಜನೆ ರೂಪಿಸಲಾಗಿದೆ. ದೇಶ ಹಾಗೂ ವಿದೇಶದಲ್ಲಿ ಇನ್ನೂ ೧೦ ಸಾವಿರ ಶಿಕ್ಷಕರನ್ನು ನೇಮಿಸಲು ತೀರ್ಮಾನಿಸಲಾಗಿದೆ. ಆದರೆ, ಲಾಭದ ಉದ್ದೇಶ ಹಾಗೂ ಕಾರ್ಯನಿರ್ವಹಣೆಯ ವೆಚ್ಚ ತಗ್ಗಿಸಲು ಶೇ.೫ರಷ್ಟು ಅಂದರೆ, ೨,೫೦೦ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತದೆ’ ಎಂದು ಬೈಜೂಸ್ ಸಹ ಸಂಸ್ಥಾಪಕಿ ದಿವ್ಯಾ ಗೋಕುಲ್‌ನಾಥ್ ತಿಳಿಸಿದ್ದಾರೆ.
‘ಸದ್ಯ ಬೈಜೂಸ್‌ನಲ್ಲಿ ೫೦ ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿಯೇ ದಕ್ಷತೆಯ ಆಧಾರದ ಮೇಲೆ ವಜಾಗೊಳಿಸ ಲಾಗುತ್ತದೆ. ಆದಾಗ್ಯೂ, ಇಂಗ್ಲಿಷ್ ಹಾಗೂ ಸ್ಪ್ಯಾನಿಶ್ ಮಾತನಾಡುವ ೧೦ ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾ ಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.