Monday, 16th September 2024

ಮಹಿಳೆಯರಿಗಾಗಿಯೇ 250 ‘ಪಿಂಕ್ ಪಾರ್ಕ್’

ನವದೆಹಲಿ: ಹಿಳೆಯರಿಗಾಗಿ ಪ್ರತ್ಯೇಕ ಬಸ್‌ಗಳು, ರೈಲು ಬೋಗಿಗಳು, ದೇವಸ್ಥಾನಗಳಲ್ಲಿ ಪ್ರತ್ಯೇಕ ಸರತಿ ಸಾಲುಗಳೂ ಇವೆ. ಇದರೊಂದಿಗೆ  250 ‘ಪಿಂಕ್ ಪಾರ್ಕ್’ಗಳು ತೆರೆದು ಕೊಳ್ಳಲಿವೆ.

ಮಹಿಳೆಯರಿಗೆ ಸುರಕ್ಷಿತ ಸಾರ್ವಜನಿಕ ಸ್ಥಳಗಳನ್ನು ಒದಗಿಸುವ ಉದ್ದೇಶದಿಂದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಗರ ದಾದ್ಯಂತ ಮಹಿಳೆಯರಿಗೆ ಮಾತ್ರ ಉದ್ಯಾನವನಗಳನ್ನು ರಚಿಸಲು ಯೋಜಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪಾರ್ಕ್‌ಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಮಹಿಳೆಯರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.

ಮಹಿಳೆಯರಿಗಾಗಿಯೇ ಹೆಚ್ಚಿನ ಉದ್ಯಾನವನಗಳನ್ನು ಸಿದ್ದಗೊಳಿಸಲು ದೆಹಲಿ ಸಜ್ಜಾಗಿದೆ. ಮಹಿಳೆಯರಿಗೆ ಹೆಚ್ಚು ಆರಾಮ ದಾಯಕ ಸ್ಥಳಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ವರದಿಗಳ ಪ್ರಕಾರ, ಎಲ್ಲಾ ಎಂಸಿಟಿ ವಾರ್ಡ್‌ಗಳಲ್ಲಿ ಈ ಉದ್ಯಾ ನವನಗಳನ್ನು ಸ್ಥಾಪಿಸಲು ಸ್ಥಳಗಳನ್ನು ಗುರುತಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ.

ದೆಹಲಿಯ ಉಪ ಮೇಯರ್ ಅಲೆ ಮೊಹಮ್ಮದ್ ಇಕ್ಬಾಲ್ ಅವರು ಈ ಯೋಜನೆಯನ್ನು ಜಾರಿಗೆ ತರಲಾಗುವುದಾಗಿ ಘೋಷಿಸಿ ದ್ದಾರೆ. ನಗರದಲ್ಲಿ ಮಹಿಳೆಯರಿಗೆ ಹೆಚ್ಚು ಆರಾಮದಾಯಕ ಸ್ಥಳವನ್ನು ಒದಗಿಸುವುದರ ಜೊತೆಗೆ ಅನೇಕ ಸೌಲಭ್ಯಗಳನ್ನು ಒದಗಿಸುವ ಆಲೋಚನೆಯನ್ನು ಹೊಂದಿರುವುದಾಗಿ ದೆಹಲಿಯ ಉಪ ಮೇಯರ್ ಹೇಳಿಕೊಂಡಿದ್ದಾರೆ.

ದೆಹಲಿಯ 250 ಮುನ್ಸಿಪಲ್ ವಾರ್ಡ್‌ಗಳಲ್ಲಿ ‘ಪಿಂಕ್ ಮಾಡೆಲ್ ಪಾರ್ಕ್’ಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಸೆಲ್ಫಿ ಪಾಯಿಂಟ್‌ಗಳು, ಸಿಸಿಟಿವಿ ಕ್ಯಾಮೆರಾಗಳು, ಶೌಚಾಲಯಗಳು, ತೆರೆದ ವ್ಯಾಯಾಮ ಉಪಕರಣಗಳು ಮತ್ತು ಹೆಚ್ಚುವರಿ ಭದ್ರತಾ ಕ್ರಮಗಳು, ಮೀಸಲಾದ ಮಕ್ಕಳ ಆಟದ ಪ್ರದೇಶಗಳಂತಹ ಎಲ್ಲಾ ವೈಶಿಷ್ಟ್ಯಗಳ ವ್ಯವಸ್ಥೆ ಮಾಡಲಾಗುತ್ತಿದೆ.

ದೆಹಲಿಯ ಉಪಮೇಯರ್ ಅಲೆ ಮೊಹಮ್ಮದ್ ಇಕ್ಬಾಲ್ ಅವರು ತಮ್ಮ ವಾರ್ಡ್ ಚಾಂದಿನಿ ಮಹಲ್‌ನಲ್ಲಿ ಇಂತಹ ‘ಪಿಂಕ್ ಪಾರ್ಕ್’ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಮಹಿಳೆಯರಿ ಮಾತ್ರ ಪ್ರವೇಶವಿದೆ. ಈ ವಿಚಾರಕ್ಕೆ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ ಎಲ್ಲಾ ಕಡೆ ಪಿಂಕ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಮೇಯರ್ ಹೇಳಿದ್ದಾರೆ.

ಇಕ್ಬಾಲ್ ಅವರು, ‘ಮಾತಾ ಸುಂದರಿ ರಸ್ತೆಯಲ್ಲಿ ಪ್ರಾಯೋಗಿಕ ಯೋಜನೆಯಾಗಿ ‘ಪಿಂಕ್ ಪಾರ್ಕ್’ ಸ್ಥಾಪಿಸಲಾಗಿದ್ದು, 10 ವರ್ಷ ದೊಳಗಿನ ಮಕ್ಕಳು ಮತ್ತು ಮಹಿಳೆಯರಿಗೆ ಭೇಟಿ ನೀಡಲು ಅವಕಾಶವಿದೆ. ಅದೇ ರೀತಿ ಇತರೆ ವಾರ್ಡ್‌ಗಳಲ್ಲೂ ಇದೇ ಮಾದರಿ ಯನ್ನು ಅನುಸರಿಸಲಾಗುವುದು’ ಎಂದರು.

ದೆಹಲಿಯಲ್ಲಿ 15,000 ಕ್ಕೂ ಹೆಚ್ಚು ಉದ್ಯಾನವನಗಳಿವೆ. ಪ್ರತಿ ವಾರ್ಡ್‌ನಲ್ಲಿರುವ ಉದ್ಯಾನವನಗಳ ಸಂಖ್ಯೆಯು ನೂರಕ್ಕೂ ಹೆಚ್ಚು ಇದೆ. ಅದೇ ರೀತಿ ಪ್ರತಿ ವಾರ್ಡ್‌ಗಳಲ್ಲಿ ಮಹಿಳೆಯರಿಗಾಗಿ ಪಿಂಕ್ ಪಾರ್ಕ್‌ಗಳನ್ನು ಪ್ರತ್ಯೇಕವಾಗಿ ರಚಿಸಲಾಗುವುದು. ಈ ಎಲ್ಲಾ ಉದ್ಯಾನವನಗಳು ತೆರೆದ ಜಿಮ್ನಾಷಿಯಂಗಳೊಂದಿಗೆ ತೋಟಗಾರಿಕೆ ಮತ್ತು ಇತರ ಸೌಲಭ್ಯಗಳನ್ನು ಹೊಂದಿರುತ್ತದೆ ಎಂದು ಉಪಮೇಯರ್ ಹೇಳಿದ್ದಾರೆ. ಹೀಗಾಗಿ ಶೀರ್ಘದಲ್ಲೇ ಪಿಂಕ್ ಪಾರ್ಕಗಗಳು ದೆಹಲಿಯೆಲ್ಲೆಡೆ ತೆರೆದುಕೊಳ್ಳಲಿವೆ.