Saturday, 14th December 2024

ಕರೋನಾ ನಿಯಂತ್ರಣಕ್ಕೆ: 2,58,089 ಸೋಂಕಿತರು ಪತ್ತೆ

#corona

ನವದೆಹಲಿ: ಕರೋನಾ ನಿಯಂತ್ರಣಕ್ಕೆ ಬಂದಂತಿದೆ. ನಿನ್ನೆಗಿಂತ 13 ಸಾವಿರದಷ್ಟು ಪ್ರಕರಣಗಳು ಕಡಿಮೆ ಯಾಗಿವೆ.

ಕಳೆದ 24 ಗಂಟೆಯಲ್ಲಿ 2,58,089 ಕೋವಿಡ್ ಸೋಂಕಿತರು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಒಂದು ದಿನದಲ್ಲಿ 1,51,740 ಸೋಂಕಿತರು ಚೇತರಿಸಿಕೊಂಡಿದೆ. ದೇಶದಲ್ಲಿ ಒಟ್ಟಾರೆ 16,56,341 ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ ದೇಶದಲ್ಲಿ 486451 ಮಂದಿ ಮೃತಪಟ್ಟಿದ್ದಾರೆ.

ಕೊರೊನಾ ಸೋಂಕಿನ ಜೊತೆ ರೂಪಾಂತರಿ ಓಮೈಕ್ರಾನ್ 8,209 ಪ್ರಕರಣಗಳು ಕೂಡ ಪತ್ತೆಯಾಗಿವೆ. ಸೋಂಕಿತರಾದ 8,209 ಜನರ ಪೈಕಿ 3,109 ಜನ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ಥಾನ, ದೆಹಲಿ ಮತ್ತು ಕರ್ನಾಟಕದಲ್ಲಿ ರೂಪಾಂತರಿ ವೈರಸ್ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕಂಡುಬಂದಿದೆ.

ಮಹಾರಾಷ್ಟ್ರದಲ್ಲಿ 1738, ಕರ್ನಾಟಕ 548, ದೆಹಲಿ 548, ರಾಜಸ್ಥಾನ 1276 ಮತ್ತು ಪಶ್ಚಿಮ ಬಂಗಾಳ 1672 ಪ್ರಕರಣಗಳು ದಾಖಲಾಗಿವೆ.