ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ನವೀಕಿರಸಲಾದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 3,038 ಹೊಸ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳು 21,179 ಕ್ಕೆ ಏರಿದೆ. ಅಂತೆಯೇ ದೇಶದಲ್ಲಿ ಒಂಬತ್ತು ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಕೋವಿಡ್ ಸಾವಿನ ಸಂಖ್ಯೆ 5,30,901 ಕ್ಕೆ ಏರಿದೆ.
ದೆಹಲಿ ಮತ್ತು ಪಂಜಾಬ್ನಿಂದ ತಲಾ ಎರಡು ಸಾವುಗಳು ವರದಿಯಾಗಿದ್ದರೆ, 24 ಗಂಟೆಗಳ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಮತ್ತು ಉತ್ತರಾಖಂಡದಿಂದ ತಲಾ ಒಂದು ಸಾವುಗಳು ವರದಿಯಾಗಿವೆ ಮತ್ತು ಕೇರಳದಲ್ಲಿ ಎರಡು ಸಾವುಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.
ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 220.66 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.