ಕಳೆದ ವರ್ಷ ರಜೆಯಲ್ಲಿ ಸೌದಿ ಅರೇಬಿಯಾಕ್ಕೆ ಮರಳಿದಾಗ ಬಂಧನಕ್ಕೊಳಗಾಗಿದ್ದರು. ಇವರು ಟ್ವೀಟರ್ ಖಾತೆ ಬಳಸಿರುವ ಬಗ್ಗೆ ಬ್ರಿಟನ್ ನ ದಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. ಆಕೆಗೆ ವಿಧಿಸಿರುವ ಶಿಕ್ಷೆಯನ್ನು ಮಾನವ ಹಕ್ಕುಗಳ ಹೋರಾಟಗಾರರು ಖಂಡಿ ಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಲ್ಮಾ ಅವರಿಗೆ ವಿಶೇಷ ಭಯೋತ್ಪಾದನಾ ನ್ಯಾಯಾಲಯವು ಪ್ರಾರಂಭದಲ್ಲಿ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು, ಬಳಿಕ ರಾಷ್ಟ್ರದ ಭದ್ರತೆ ಅಸ್ಥಿರಗೊಳಿಸಲು ಹಾಗೂ ನಾಗರಿಕ ಅಶಾಂತಿಯನ್ನು ಉಂಟುಮಾಡಲು ಶೆಹಾರ್ ಇಂಟರ್‌ನೆಟ್ ಬಳಸಿದ್ದಾ ರೆಂದು ನ್ಯಾಯಾ ಲಯ ಅವರಿಗೆ 34 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.