Thursday, 12th December 2024

ಷೇರುಪೇಟೆ ಜಿಗಿತ: 350 ಪಾಯಿಂಟ್ಸ್ ಏರಿಕೆ

ಮುಂಬೈ: ಭಾರತೀಯ ಷೇರುಪೇಟೆ ಮಂಗಳವಾರ ಎತ್ತರಕ್ಕೆ ಜಿಗಿತಗೊಂಡಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 350 ಪಾಯಿಂಟ್ಸ್, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 117 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 350 ಪಾಯಿಂಟ್ಸ್ ಏರಿಕೆಗೊಂಡು 52,925 ಪಾಯಿಂಟ್ಸ್‌ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 117 ಪಾಯಿಂಟ್ಸ್‌ ಏರಿಕೆಗೊಂಡು 15,864 ಮುಟ್ಟಿದೆ. ಏಷ್ಯಾದ ಮಾರುಕಟ್ಟೆಗಳು ನಾಲ್ಕು ವಾರಗಳ ಕನಿಷ್ಠ ಮಟ್ಟದಿಂದ ಪುಟಿ ದೆದ್ದಿದ್ದು, ಹೂಡಿಕೆದಾರರ ಸಂಪತ್ತನ್ನ ಹೆಚ್ಚಿಸಿದೆ.

ಇಂಡಸ್ ಟವರ್ಸ್, ಅದಾನಿ ಪೋರ್ಟ್ಸ್, ಗುಜರಾತ್ ಗ್ಯಾಸ್, ಇಂಡಿಯಾಬುಲ್ಸ್ ಹೆಚ್‌ಎಸ್‌ಜಿ, ಮಾರುತಿ ಸುಜುಕಿ, ಪಿವಿಆರ್, ಅಶೋಕ್ ಲೇಲ್ಯಾಂಡ್, ಒಎನ್‌ಜಿಸಿ ಷೇರುಗಳು ಏರಿಕೆ ದಾಖಲಿಸಿವೆ.