Saturday, 14th December 2024

ಕರೋನಾ ಪ್ರಕರಣಗಳಲ್ಲಿ ಮತ್ತೆ ಏರಿಕೆ: 35,178 ಮಂದಿಗೆ ಸೋಂಕು ದೃಢ

#corona

ನವದೆಹಲಿ : ಭಾರತದಲ್ಲಿ ಕರೋನಾ ವೈರಸ್ ಸೊಂಕಿನ ಪ್ರಕರಣಗಳಲ್ಲಿ ಇಂದು ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 35,178 ಮಂದಿಗೆ ಹೊಸದಾಗಿ ಕರೋನಾ ಸೋಂಕು ದೃಢಪಟ್ಟಿದೆ.

ಕಳೆದ 24 ಗಂಟೆಗಳಲ್ಲಿ 35,178 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ3,22,85,857ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ 440 ಮಂದಿ ಮೃತಪಟ್ಟಿದ್ದು, ಈ ಮೂಲಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,32,519 ಕ್ಕೆ ಏರಿಕೆ ಯಾಗಿದೆ. ಸದ್ಯ ದೇಶದಲ್ಲಿ 3,67,415 ಸಕ್ರಿಯ ಪ್ರಕರಣಗಳಿವೆ.