Sunday, 15th December 2024

ಷೇರುಪೇಟೆ: ಸೆನ್ಸೆಕ್ಸ್ 395, ನಿಫ್ಟಿ 112 ಪಾಯಿಂಟ್ಸ್‌ ಹೆಚ್ಚಳ

ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆ ಸೋಮವಾರ ಸಕಾರಾತ್ಮಕ ವಹಿವಾಟು ಮೂಲಕ ಸೆನ್ಸೆಕ್ಸ್ 395 ಪಾಯಿಂಟ್ಸ್‌ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 112 ಪಾಯಿಂಟ್ಸ್‌ ಹೆಚ್ಚಳಗೊಂಡಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 395 ಪಾಯಿಂಟ್ಸ್‌ ಏರಿಕೆಗೊಂಡು 52,880 ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 112.20 ಪಾಯಿಂಟ್ಸ್ ಹೆಚ್ಚಾಗಿ 15,834.40 ಮುಟ್ಟಿದೆ. ಹಿಂಡಾಲ್ಕೊ ಇಂಡಸ್ಟ್ರೀಸ್, ಒಎನ್‌ಜಿಸಿ, ಎಸ್‌ಬಿಐ, ಟಾಟಾ ಸ್ಟೀಲ್ ಮತ್ತು ಕೋಲ್ ಇಂಡಿಯಾ ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿದ್ದು, ಎಚ್‌ಡಿಎಫ್‌ಸಿ ಲೈಫ್, ಟೆಕ್ ಮಹೀಂದ್ರಾ, ಬಿಪಿಸಿಎಲ್ ಮತ್ತು ಬ್ರಿಟಾನಿಯಾ ಇಂಡಸ್ಟ್ರೀಸ್ ಹೆಚ್ಚಿನ ನಷ್ಟ ಅನುಭವಿಸಿದ ಷೇರುಗಳಾಗಿವೆ.

ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.3 ರಿಂದ 0.8ರಷ್ಟು ಏರಿಕೆಯಾಗಿದೆ.