Sunday, 15th December 2024

ಆಟೋ ಮೇಲೆ ಕಂಟೇನರ್ ಟ್ರಕ್​​​ ಬಿದ್ದು ನಾಲ್ವರ ಸಾವು

ನವದೆಹಲಿ: ಐಜಿಐ ಸ್ಟೇಡಿಯಂ ಬಳಿ ಚಲಿಸುತ್ತಿದ್ದ ಆಟೋ ಮೇಲೆ ಕಂಟೇನರ್ ಟ್ರಕ್​​​ ಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಂಟೇನರ್​​ ಆಟೋರಿಕ್ಷಾದ ಮೇಲೆ ಬೀಳುತ್ತಿದ್ದಂತೆಯೇ ಆಟೋದಲ್ಲಿದ್ದ ಮೂವರು ಪ್ರಯಾಣಿಕರು ಹಾಗೂ ಆಟೋ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದೆ. ಕಂಟೇನರ್​ ಟ್ರಕ್​ ಚಲಾಯಿಸುತ್ತಿದ್ದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಸ್ಥಳೀಯ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾ ನಿಸಿದ್ದಾರೆ. ಇದುವರೆಗೂ ಮೃತರ ಗುರುತು ಪತ್ತೆ ಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪರಾರಿಯಾಗಿರುವ ಆಟೋ ಚಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.