Sunday, 15th December 2024

ದೆಹಲಿಯಲ್ಲಿ ಒಮಿಕ್ರಾನ್ ಅಬ್ಬರ: ಮತ್ತೆ ನಾಲ್ಕು ಜನರಲ್ಲಿ ಸೋಂಕು

Omicron

ನವದೆಹಲಿ : ದೆಹಲಿಯಲ್ಲಿ ಒಮಿಕ್ರಾನ್ ಸೋಂಕಿನ ಅಬ್ಬರ ಹೆಚ್ಚಳವಾಗಿದ್ದು, ಗುರುವಾರ ಮತ್ತೆ ನಾಲ್ಕು ಜನರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ.

ದೆಹಲಿಯಲ್ಲಿ ಗುರುವಾರ 4 ಹೊಸ ಒಮೈಕ್ರಾನ್ ರೋಗಿಗಳು ದೃಢಪಟ್ಟಿವೆ. ಈ ಮೂಲಕ ದೆಹಲಿಯಲ್ಲಿ ಒಟ್ಟು 10 ಒಮೈಕ್ರಾನ್ ಪ್ರಕರಣಗಳಿವೆ.

ಇನ್ನು ದೇಶದ ಹಲವು ರಾಜ್ಯಗಳಲ್ಲಿ ಒಮಿಕ್ರಾನ್ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು ಯಾವ ರಾಜ್ಯದಲ್ಲಿ ಎಷ್ಟು ಒಮಿಕ್ರಾನ್ ಪ್ರಕರಣಗಳಿವೆ?

ಮಹಾರಾಷ್ಟ್ರ-32, ರಾಜಸ್ಥಾನ-17, ದೆಹಲಿ-10, ಕೇರಳ- 5, ಗುಜರಾತ್-4, ಕರ್ನಾಟಕ-3, ಆಂಧ್ರಪ್ರದೇಶ-1, ಚಂಡೀಗಢ -1, ಪಶ್ಚಿಮ ಬಂಗಾಳ-1 ಹಾಗೂ

ತಮಿಳುನಾಡು-1 ಇಂತಿವೆ.