Friday, 22nd November 2024

400 ಹೊಸ ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಅಗತ್ಯ ಕ್ರಮ

#Train

ನವದೆಹಲಿ : ಮುಂದಿನ 3 ವರ್ಷದಲ್ಲಿ 400 ಹೊಸ ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದುಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಮಂಗಳವಾರ 2022-23 ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಇದು ವಿತ್ತ ಸಚಿವರ ನಾಲ್ಕನೇ ಬಜೆಟ್ ಆಗಿದೆ.

ಬಜೆಟ್‌ ಮಂಡನೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತ, ಕರೋನಾದಿಂದ ಆರೋಗ್ಯ ಮತ್ತು ಆರ್ಥಿಕ ತೊಂದರೆ ಆಗಿದೆ. ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಆಚರಿಸ್ತಿದ್ದೀವಿ.

2014ರಿಂದ ಜನರ ಕಲ್ಯಾಣವೇ ನಮ್ಮ ಸರ್ಕಾರದ ಧ್ಯೇಯವಾಗಿದೆ. 2014 ರಿಂದ ನಾಗರಿನ್ನು ಸಶಕ್ತರಕಣ ಗೊಳಿಸಲು ಯತ್ನಿಸಿದ್ದೇವೆ. 2022 ರಲ್ಲಿ ಆಋಥಿಕ ಬೆಳವಣಿಗೆ 9.2 ರಷ್ಟು ಬೆಳವಣಿಗೆ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮುಂದಿನ 25 ವರ್ಷಗಳಿಗೆ ಸರ್ಕಾರದ ಬ್ಲೂಪ್ರಿಂಟ್ ಸಿದ್ದವಾಗಿದೆ. ವಸತಿ, ಬಡವರ ಕಲ್ಯಾಣಕ್ಕೆ ಸರ್ಕಾರ ಅದ್ಯತೆ ನೀಡಲಿದೆ. 60 ಲಕ್ಷ ಉದ್ಯೋಗ ಸೃಷ್ಠಿಯಾಗಿದೆ. ಆಂತರಿಕಾಗಿ 30 ಲಕ್ಷ ಹೆಚ್ಚುವರಿ ಉದ್ಯೋಗ ನೀಡಲಾಗುವುದು. ಕಲ್ಲಿದ್ದಲು ಕ್ಷೇತ್ರದಲ್ಲಿ 100 ವರ್ಷಗಳ ಅಭಿವೃದ್ಧಿ ಮಾಡುತ್ತೇವೆ ಎಂದರು.